ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 'ಲಷ್ಕರ್' ಪರ ಬರಹ; ನಗರದಲ್ಲಿ ವಿಹಿಂಪ ಪ್ರತಿಭಟನೆ

ಮಂಗಳೂರು: ನಿಷೇಧಿತ ಉಗ್ರ ಸಂಘಟನೆ ಪರ ನಗರದ ಕದ್ರಿ ಠಾಣಾ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಜೈಕಾರ ಹಾಗೂ ಸಂಘಪರಿವಾರಕ್ಕೆ ಎಚ್ಚರಿಕೆಯ ನೀಡಿದ ಗೋಡೆ ಬರಹದ ವಿರುದ್ಧ ವಿಶ್ವ ಹಿಂದೂ ಪರಿಷತ್ ನಗರದ ಮಲ್ಲಿಕಟ್ಟೆ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಿತು. 50 ಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ದೇಶ ವಿರೋಧಿಗಳ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು.‌ ಈ ಸಂದರ್ಭ ವಿಹಿಂಪ ಮುಖಂಡ ಗೋಪಾಲ್ ಕುತ್ತಾರ್ ಮಾತನಾಡಿ, ಆರೋಪಿಗಳನ್ನ ಶೀಘ್ರವೇ ಬಂಧಿಸಿ, ಈ ದುಷ್ಕೃತ್ಯದ ಹಿಂದೆ ಇರೋ ಸಂಘಟನೆ ಹಾಗೂ ಮಾನಸಿಕತೆ ಯಾವುದು ಅನ್ನೋದು ಬಯಲಾಗಬೇಕು. ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳದೇ ಹೋದಲ್ಲಿ ಪ್ರತಿ ತಾಲೂಕು ಕೇಂದ್ರಗಳಲ್ಲೂ ವಿಶ್ವ ಹಿಂದೂ ಪರಿಷತ್ ತೀವ್ರ ಪ್ರತಿಭಟನೆ ನಡೆಸಲಿದೆ ಎಂದರು.

Edited By : Manjunath H D
Kshetra Samachara

Kshetra Samachara

27/11/2020 01:17 pm

Cinque Terre

7.97 K

Cinque Terre

3

ಸಂಬಂಧಿತ ಸುದ್ದಿ