ಮುಲ್ಕಿ: ಕೊರೊನಾ ನೆಪವೊಡ್ಡಿ ಗ್ರಾಪಂ ಚುನಾವಣೆ ಮುಂದೂಡಲು ರಾಜ್ಯ ಬಿಜೆಪಿ ಸರ್ಕಾರ ಪ್ರಯತ್ನಿಸಿದರೂ, ನ್ಯಾಯಾಲಯ ಚುನಾವಣೆ ವೇಳಾಪಟ್ಟಿ ಪ್ರಕಟಿಸಲು ನಿರ್ದೇಶನ ನೀಡಿದ್ದರಿಂದ ಯಾವುದೇ ಕ್ಷಣ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಸಜ್ಜಾಗಿರಬೇಕು. ಮುಲ್ಕಿ ಹೋಬಳಿಯ ಹೆಚ್ಚಿನ ಗ್ರಾ.ಪಂ.ಗಳಲ್ಲಿ ಕಾಂಗ್ರೆಸ್ ಬೆಂಬಲಿತರ ಗೆಲುವಿನ ಧ್ವಜ ಹಾರಬೇಕು ಎಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಚುನಾವಣೆ ಉಸ್ತುವಾರಿ ಮಿಥುನ್ ರೈ ಹೇಳಿದರು.
ಅವರು ಹಳೆಯಂಗಡಿ ಕಾಂಗ್ರೆಸ್ ಕಚೇರಿ ಸಭಾಭವನದಲ್ಲಿ ನಡೆದ ಮುಲ್ಕಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಗ್ರಾ.ಪಂ. ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಕೆಪಿಸಿಸಿ ಕೋ-ಆರ್ಡಿನೇಟರ್
ವಸಂತ ಬೆರ್ನಾಡ್, ಯುವ ಇಂಟರ್ ಜಿಲ್ಲಾಧ್ಯಕ್ಷ
ಚಿರಂಜೀವಿ ಅಂಚನ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಪ್ರಸಾದ್ ಮಲ್ಲಿ , ಮುಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಯುವ ಇಂಟಕ್ ಅಧ್ಯಕ್ಷ ಅಶ್ವಿನ್ ಆಳ್ವ, ಹಳೆಯಂಗಡಿ ವಲಯ ಅಧ್ಯಕ್ಷ ಮನ್ಸೂರ್ ಸಾಗ್ ಮತ್ತಿತರರಿದ್ದರು.
Kshetra Samachara
23/11/2020 08:56 am