ಮಂಗಳೂರು: ಮಂಗಳೂರಲ್ಲಿ ಬಿಜೆಪಿಯ ಎಂಪಿ ಇದ್ದಾರೆ. ಮುಖ್ಯಮಂತ್ರಿಗಿಂತ ಅವರೇ ಪವರ್ ಫುಲ್ ಅಂತಾ ಕೆಲ ಮಾಧ್ಯಮದವರು ವರದಿ ಮಾಡಿದ್ದರು. ಆದರೆ, ಮಂಗಳೂರಿನ ಎಂಪಿ ಜನರ ಭಾವನೆಯನ್ನೇ ಅರ್ಥ ಮಾಡಿಕೊಂಡಿಲ್ಲ. ಮಂಗಳೂರಿನ ಎಂಪಿ ಏನು ಕೆಲಸ ಮಾಡುತ್ತಿದ್ದಾರೆ ಅಂತಾ ನನಗೆ ಅರ್ಥ ಆಗುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕಿಡಿಕಾರಿದ್ದಾರೆ.
ಕೇರಳದ ಕಣ್ಣೂರಿಗೆ ಹೋಗಿ ಮಂಗಳೂರಿಗೆ ಬಂದಿದ್ದ ಅವರು, ಬಜಪೆಯಲ್ಲಿ ಮಂಗಳೂರು ಏರ್ ಪೋರ್ಟ್ ಖಾಸಗೀಕರಣ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಖಾಸಗೀಕರಣವನ್ನು ರಾಷ್ಟ್ರೀಕರಣ ಮಾಡುವುದು ಕಾಂಗ್ರೆಸ್ ನ ಪದ್ಧತಿ. ಆದ್ರೆ ಖಾಸಗೀಕರಣ ಮಾಡುವುದು ಬಿಜೆಪಿಯವರ ಪದ್ಧತಿ ಎಂದರು. ಇನ್ನು ಮಂಗಳೂರಲ್ಲಿ ನಡೆಯುತ್ತಿರುವ ಪ್ರತಿಭಟನೆ ಕೇವಲ ಕಾಂಗ್ರೆಸ್ ಹೋರಾಟ ಅಲ್ಲ, ಜನರ ಹೋರಾಟ. ದಕ್ಷಿಣ ಕನ್ನಡ, ಉಡುಪಿ ಸೇರಿ ಕರಾವಳಿ ಜನರ ಭಾವನೆ ಅರಿತುಕೊಂಡು ಹೋರಾಟ ಮಾಡುತ್ತಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯ ಆಸ್ತಿ ಸಂಸ್ಕೃತಿ. ಆ ಸಂಸ್ಕೃತಿ ಉಳಿಸುವ ಪದ್ಧತಿಯಲ್ಲಿ ಅಭಿವೃದ್ಧಿ ಇರಬೇಕು. ನಮ್ಮ ಕಾರ್ಯಕರ್ತರ ಸರಣಿ ಪ್ರತಿಭಟನೆಗೆ ರಾಜ್ಯ ಕಾಂಗ್ರೆಸ್ ಬೆಂಬಲ ನೀಡುತ್ತದೆ ಎಂದು ಘೋಷಿಸಿದರು.
Kshetra Samachara
12/11/2020 01:21 pm