ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್ : "ಬಜಪೆ ಏರ್ ಪೋರ್ಟ್ ಖಾಸಗೀಕರಣ ವಿರೋಧಿಸಿ ಪ್ರತಿ ವಾರ ಕೆಂಜಾರಿನಲ್ಲಿ ಕಾಂಗ್ರೆಸ್ ಧರಣಿ"

ಮುಲ್ಕಿ: ಶ್ರೀನಿವಾಸ ಮಲ್ಯ ಅವರ ಸತತ ಪ್ರಯತ್ನದಿಂದ ಜವಾಹರ ಲಾಲ್ ನೆಹರೂ ಅವರು ವಿಮಾನ ನಿಲ್ದಾಣ ಕೊಡುಗೆಯಾಗಿ ನೀಡಿದ್ದು, ಅದನ್ನೀಗ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಗುಜರಾತಿನ ಅದಾನಿ ಸಂಸ್ಥೆಗೆ ಗುತ್ತಿಗೆ ನೀಡಿದೆ.

ಇನ್ನು ಮುಂದೆ ರೈಲ್ವೆ ಮತ್ತಿತರ ಬೃಹತ್ ಉದ್ದಿಮೆಗಳನ್ನೂ ಕೇಂದ್ರ ಸರಕಾರ ಖಾಸಗಿಕರಣ ಮಾಡುವ ಹುನ್ನಾರ ನಡೆಸು ತ್ತಿದ್ದು ಉದ್ಯೋಗ ನಷ್ಟ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನ.12ರಂದು ಬೆಳಿಗ್ಗೆಯಿಂದ ಮಧ್ಯಾಹ್ನವರೆಗೆ ಮುಲ್ಕಿ ಮೂಡಬಿದ್ರೆ ಕಾಂಗ್ರೆಸ್ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಿದ್ದೇವೆ ಎಂದು ಮಾಜಿ ಸಚಿವ ಅಭಯ ಚಂದ್ರ ಜೈನ್ ಸುರತ್ಕಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿಭಟನೆಯಲ್ಲಿ ದ.ಕ. ಜಿಲ್ಲಾ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಕೆಂಜಾರಿನಲ್ಲಿ ವಾರಕ್ಕೊಂದು ದಿನ ಪ್ರತಿಭಟನೆ ನಡೆಸಲಿದ್ದೇವೆ.

ವಿಮಾನ ನಿಲ್ದಾಣ ಕೊಡುಗೆ ನೀಡಿದ ಶ್ರೀನಿವಾಸ ಮಲ್ಯರ ಹೆಸರಿಡದೆ ಅದಾನಿ ಹೆಸರಿಟ್ಟಿರುವ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದರು. ದ.ಕ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆಸ್ಕರ್ ಫರ್ನಾಂಡಿಸ್, ಜನಾರ್ದನ ಪೂಜಾರಿ, ವೀರಪ್ಪ ಮೊಯಿಲಿಯಂತಹ ಘಟಾನುಘಟಿ ನಾಯಕರು ಎಂ ಆರ್ ಪಿಎಲ್ ನಂತಹ ಬೃಹತ್ ಕಂಪನಿಗಳನ್ನು ಸ್ಥಾಪಿಸಿ ಸಾವಿರಾರು ಮಂದಿಗೆ ಉದ್ಯೋಗ ಒದಗಿಸಿದ್ದಾರೆ. ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನೆ ಕೇಳುವ ಬಿಜೆಪಿಯವರಿಗೆ ದ.ಕ. ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿರುವ ಬಂದರು, ಎನ್ಐಟಿಕೆ, ರೈಲ್ವೆ, ಎಂಸಿಎಫ್ ಮತ್ತಿತರ ಬೃಹತ್ ಕಂಪನಿಗಳೇ ಸಾಕ್ಷಿ ಎಂದರು.

ಪೆರ್ಮುದೆ ಗ್ರಾಪಂ ಮಾಜಿ ಅಧ್ಯಕ್ಷ ಉಲ್ಲಾಸ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಹಸನಬ್ಬ ಮಂಗಳಪೇಟೆ, ಬಜಪೆ ಪಂ. ಮಾಜಿ ಅಧ್ಯಕ್ಷ ಶಾಹುಲ್ ಹಮೀದ್, ಉದಯ ಕುಮಾರ್, ಬಿ.ಜೆ. ರಹೀಮ್, ಸರ್ಫರಾಜ್ ನವಾಜ್ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

11/11/2020 09:46 pm

Cinque Terre

8.62 K

Cinque Terre

2

ಸಂಬಂಧಿತ ಸುದ್ದಿ