ಬಂಟ್ವಾಳ: ಜಿ.ಪಂ. ಸದಸ್ಯ ಬಿ.ಪದ್ಮಶೇಖರ ಜೈನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿ ಸುಳ್ಳು ಸುದ್ದಿ ಪ್ರಕಟಿಸಿದ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪುಂಜಾಲಕಟ್ಟೆ ಆರಕ್ಷಕ ಠಾಣೆಗೆ ದೂರು ನೀಡಿದ್ದಾರೆ.
ಈ ಸಂದರ್ಭ ಕಾಂಗ್ರೆಸ್ ಪ್ರಮುಖರಾದ ಕೆ.ಮಾಯಿಲಪ್ಪ ಸಾಲ್ಯಾನ್, ಬಾಲಕೃಷ್ಣ ಅಂಚನ್, ಮೋಹನ್ ಸಾಲ್ಯಾನ್, ಜಗದೀಶ್ ಕೊಯಿಲ, ಕೆ.ವಿ. ರಾಜೇಂದ್ರ, ಜಯ ಬಂಗೇರ, ದಯಾನಂದ ಶೆಟ್ಟಿ ಅಮೈ, ಸದಾನಂದ ಶೆಟ್ಟಿ ಇಚ್ಚಿಲ, ನವೀನ್ ಚಂದ್ರ ಶೆಟ್ಟಿ ವಾಮದಪದವು, ಸುರೇಂದ್ರ ಶೆಟ್ಟಿ ಎರ್ಮೆನಾಡು, ಆದಂ ಕುಂಞಿ ಮಣಿನಾಲ್ಕೂರು, ವಿಕ್ಟರ್ ಡಿಸೋಜ, ಚಂದ್ರಶೇಖರ ಕರ್ಣ ಮತ್ತಿತರರು ಇದ್ದರು.
Kshetra Samachara
06/11/2020 10:01 am