ಉಡುಪಿ: ನಾನು ಬದಲಾಗಿದ್ದೇನೆ ಎಂದು ಮತ ಪಡೆದು ಜಯ ಗಳಿಸಿದ ಬೈಂದೂರು ಶಾಸಕ ಸುಕುಮಾರ ಶೆಟ್ಟಿಯವರು ಬದಲಾಗಿಯೇ ಇಲ್ಲ! ಅವರು ಹಿಂದಿನ ಧರ್ಮದರ್ಶಿ ಮನೋಭಾವದಲ್ಲೆ ಇದ್ದಾರೆ. ಹಿಂದೆ ಅವರು ಧರ್ಮದರ್ಶಿಯಾಗಿದ್ದಾಗ ನಾವು ಕಾಲಿಗೆ ಬಿದ್ದಿದ್ದೇವೆ, ಇಂದಿಗೂ ಕೂಡ ಎಲ್ಲರನ್ನು ಕಾಲಿಗೆ ಬೀಳಿಸಿಕೊಳ್ಳುವ ಮನೋಭಾವ ಹೊಂದಿದ್ದಾರೆ ಎಂದು ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ ಹೇಳಿದರು.
ಹೊಸಂಗಡಿಯಲ್ಲಿ ವಂಡ್ಸೆಯ ಸ್ವಾವಲಂಬಿ ಹೊಲಿಗೆ ಕೇಂದ್ರ ಎತ್ತಂಗಡಿ ಮಾಡಿರುವ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ಮತ್ತು ವಿವಿಧ ಸಂಘಟನೆಗಳ ಸಹಭಾಗಿತ್ವ ದಲ್ಲಿ ನಡೆದ ಸರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು.
ಸುಕುಮಾರ ಶೆಟ್ಟಿಯವರು ಜಯ ಗಳಿಸಿದ ಬಳಿಕ ಇಡೀ ಕ್ಷೇತ್ರಕ್ಕೇ ಶಾಸಕರು ಎನ್ನುವುದನ್ನು ಮರೆತಿದ್ದಾರೆ. ತನ್ನವರನ್ನು ಮೆಚ್ಚಿಸುವ ಕಾರ್ಯದಲ್ಲಿ ನಿರತರಾಗುವ ಮೂಲಕ ಸ್ವಾವಲಂಬಿ ಬಡ ಮಹಿಳೆಯರ ಹೊಲಿಗೆ ತರಬೇತಿ ಕೇಂದ್ರವನ್ನು ಅಕ್ರಮವಾಗಿ ಎತ್ತಂಗಡಿ ಮಾಡಿದ್ದಾರೆ. ಇನ್ನಾದರೂ ಎಚ್ಚೆತ್ತು, ಆ ಬಡಪಾಯಿ ಮಹಿಳೆಯರ ಜೊತೆ ಮಾತನಾಡಿ ಅವರಿಗೆ ಶಾಶ್ವತ ವ್ಯವಸ್ಥೆ ಕಲ್ಪಿಸಿದರೆ ಉತ್ತಮ. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಸುತ್ತವೆ. ಈ ಮೂಲಕ ನೀವು ಬದಲಾಗಿರುವುದನ್ನು ರುಜುಮಾಡಿ ಎಂದರು. ಸಭೆಯಲ್ಲಿ ಸ್ಥಳೀಯರು, ಮುಖಂಡರು ಉಪಸ್ಥಿತರಿದ್ದರು.
Kshetra Samachara
30/10/2020 01:16 pm