ಉಡುಪಿ: ಪರ್ಕಳ ಗ್ಯಾಟ್ಸನ್ ಅಚ್ಯುತ ನಗರ ನಿವಾಸಿ ಮೈಕಲ್ ಡಿ’ಸೋಜಾ (108) ಅವರು ನಿಧನ ಹೊಂದಿದರು.
ಮದ್ರಾಸ್ ಸರಕಾರ ಇರುವಾಗ ಸೈನ್ಯಕ್ಕೆ ಸೇರಿದ್ದ ಅವರು ಮೆಕ್ಯಾನಿಕ್/ಡ್ರೈವರ್ ಆಗಿ ಸೇನೆಯಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕೆಲವರ್ಷಗಳಿಂದ ಪರ್ಕಳದ ಸಂಬಂಧಿಕರ ಮನೆಯಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದರು. ಸೈನ್ಯದಲ್ಲಿನ ಸೇವೆಯ ಅನಂತರ ಪಿಡಬ್ಲ್ಯುಡಿ ಇಲಾಖೆಗೆ ಸೇರಿ ಉಡುಪಿ ರಥಬೀದಿಯ ರಥ ಸುತ್ತುವ ನಾಲ್ಕು ಬೀದಿ ಕಾಂಕ್ರೀಟ್ ರಸ್ತೆ, ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಮಂಗಳೂರಿನ ಕೂಳೂರು ಸೇತುವೆ, ಮಲ್ಪೆ ಕಲ್ಮಾಡಿ ಸೇತುವೆ, ಬೈಂದೂರಿನ ಸೇತುವೆಗಳು ಹಾಗೂ ಉಭಯ ಜಿಲ್ಲೆಯ ಹೆಚ್ಚಿನ ಹಳೆಯದಾದ ಸೇತುವೆಗಳ ನಿರ್ಮಾಣ ಕಾರ್ಯದಲ್ಲಿ ಅವರೂ ಇದ್ದರು. ಇಳಿ ವಯಸ್ಸಿನಲ್ಲೂ ವಾಹನ ಚಾಲನೆಯನ್ನು ಉತ್ತಮವಾಗಿ ಮಾಡುತ್ತಿದ್ದ ಅವರಿಗೆ ಆರ್‌ಟಿಒ ಇಲಾಖೆ 2024ರ ತನಕ ಚಾಲನ ಪರವಾನಿಗೆಯನ್ನೂ ನೀಡಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
Kshetra Samachara
09/09/2022 09:29 am