ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ ನಗರದಲ್ಲಿ ಕೈ ಕೊಡುತ್ತಿರುವ ವಿದ್ಯುತ್ : ಸಾರ್ವಜನಿಕರಿಗೆ ತಪ್ಪದ ಕಿರಿಕಿರಿ

ಸುಳ್ಯ:ಹತ್ತಾರು ಬಾರಿ ಬಂದು ಮಾಯವಾಗುವ ಸುಳ್ಯದ ವಿದ್ಯುತ್ ಕಣ್ಣಾ ಮುಚ್ಚಾಲೆ ಮುಂದುವರಿದಿದೆ. ಮಳೆಗಾಲ ಆರಂಭಗೊಂಡ ಬಳಿಕ ವಿದ್ಯುತ್ ಸಮಸ್ಯೆ ತೀವ್ರಗೊಂಡಿದ್ದು ಗ್ರಾಮೀಣ ಪ್ರದೇಶ ಮಾತ್ರವಲ್ಲದೇ ನಗರದಲ್ಲಿಯೂ ಜನರಿಗೆ ಕಿರಿ ತಪ್ಪುವುದಿಲ್ಲ. ಸುಳ್ಯ ನಗರದಲ್ಲಿ ಇಂದು ಹಗಲು ಹಲವು ಬಾರಿ ವಿದ್ಯುತ್ ಕಡಿತವಾಗಿತ್ತು.

ಬಂದರೂ ಕೆಲವೇ ಹೊತ್ತಿನಲ್ಲಿ ವಿದ್ಯುತ್ ಮಾಯವಾಗುತ್ತಿತ್ತು. ಹಲವು ಗಂಟೆಗಳ ಕಾಲ ನಿರಂತರ ವಿದ್ಯುತ್ ಕಡಿತ ಇತ್ತು. ಕತ್ತಲಾದ ಬಳಿಕವೂ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಕಳೆಯುವಂತಾಗಿತ್ತು. ರಾತ್ರಿ ಒಂಭತ್ತು ಗಂಟೆಯವರೆಗೂ ನಗರದ ಹಲವು ಭಾಗದಲ್ಲಿ ಕತ್ತಲಲ್ಲಿ ಮುಳುಗಿತ್ತು. ರಾತ್ರಿ ಒಂಭತ್ತು ಗಂಟೆಯ ಬಳಿಕ ಕರೆಂಟ್ ಬಂದಿದೆ.

ಅರಂತೋಡು, ತೋಡಿಕಾನ ವಿದ್ಯುತ್ ಅಡಚಣೆ- ಸಾರ್ವಜನಿಕರ ಆಕ್ರೋಶ: ತಾಲೂಕಿನ ಗ್ರಾಮೀಣ ಭಾಗದಲ್ಲಿಯೂ ವಿದ್ಯುತ್ ಸಮಸ್ಯೆ ತೀವ್ರಗೊಂಡಿದೆ.

ಅರಂತೋಡು, ತೋಡಿಕಾನ, ಸಂಪಾಜೆ ಗ್ರಾಮದಲ್ಲಿ ನಿರಂತರವಾಗಿ ವಿದ್ಯುತ್ ಅಡಚಣೆಯಾಗುತ್ತಿದೆ ಎಂದು ಅರಂತೋಡು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಅಶ್ರಫ್ ಗುಂಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಂತೋಡಿನಲ್ಲಿ ಮೆಸ್ಕಾಂ ಕಚೇರಿ ಇದ್ದರೂ ನಿರಂತರ ಸಮಸ್ಯೆ ತಪ್ಪುವುದಿಲ್ಲ. ರಾತ್ರಿ ಮತ್ತು ಹಗಲು ಹೊತ್ತಿನಲ್ಲಿ ವಿದ್ಯುತ್ ಇಲ್ಲದೆ ಸಾರ್ವಜನಿಕ ರು ಪರದಾಡುವ ಪರಿಸ್ಥಿತಿ ಇದೆ. ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಅಶ್ರಫ್ ಗುಂಡಿ ಆಗ್ರಹಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

15/07/2022 10:56 pm

Cinque Terre

4.34 K

Cinque Terre

0