ಮಲ್ಪೆ: ಮಲ್ಪೆಯ ಪ್ರಸಿದ್ಧ ಪ್ರವಾಸೀ ತಾಣ ಸೈಂಟ್ ಮೇರಿಸ್ ಐಲ್ಯಾಂಡ್ ಗೆ ಪ್ರವಾಸಕ್ಕೆ ಬಂದು ನೀರುಪಾಲಾಗಿದ್ದ ಮೂವರು ವಿದ್ಯಾರ್ಥಿಗಳ ಪೈಕಿ ಓರ್ವನ ಶವ ಇನ್ನೂ ಸಿಕ್ಕಿಲ್ಲ. ಮೂರನೇ ವಿದ್ಯಾರ್ಥಿಯ ಶವಕ್ಕಾಗಿ ತೀವ್ರ ಶೋಧ ಕಾರ್ಯ ಮುಂದುವರೆದಿದೆ.ಅಲೆನ್ ರೇಜಿ, ಅಮಲ್ ಸಿ ಅನಿಲ್ ಎಂಬುವರ ಶವವು ಮಧ್ಯಾಹ್ನವೇ ಸಿಕ್ಕಿದ್ದರೆ ,ಅಂಟೋನಿ ಶೆಣೈ ಮೃತದೇಹ ಇನ್ನೂ ಪತ್ತೆಯಾಗಿಲ್ಲ.ಮಲ್ಪೆಯ ಆಪತ್ಬಾಂಧವ ಈಶ್ವರ್ ಮಲ್ಪೆ ನೇತೃತ್ವದಲ್ಲಿ ಆರು ಗಂಟೆ ತನಕ ಶೋಧ ಕಾರ್ಯ ನಡೆದರೂ ಶವ ಇನ್ನೂ ಪತ್ತೆಯಾಗಿಲ್ಲ. 42 ವಿದ್ಯಾರ್ಥಿಗಳಿದ್ದ ತಂಡವು ಕೇರಳದ ಕೊಟ್ಟಾಯಂನಿಂದ ಬಂದಿತ್ತು.
Kshetra Samachara
08/04/2022 09:09 am