ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹಿರಿಯ ನ್ಯಾಯವಾದಿ, ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಪ್ರಥಮ ಶಿಷ್ಯ ಜಗನ್ನಾಥ್ ಇನ್ನಿಲ್ಲ

ಮಂಗಳೂರು: ನಗರದ ಹಿರಿಯ ವಕೀಲ ಹಾಗೂ ನೋಟರಿ, ಎಂ.ಜಗನ್ನಾಥ್(89) ಅಲ್ಪಕಾಲದ ಅಸೌಖ್ಯದಿಂದ ಇಂದು ಮೃತಪಟ್ಟಿದ್ದಾರೆ.

ಕೇಂದ್ರದ ಮಾಜಿ ಸಚಿವ, ವಕೀಲ ಜನಾರ್ದನ ಪೂಜಾರಿಯವರಿಗೆ ವಕೀಲಿಕೆಯಲ್ಲಿ ಎಂ‌.ಜಗನ್ನಾಥ್ ಪ್ರಥಮ ಶಿಷ್ಯರಾಗಿದ್ದರು‌‌. ಮೃತರು ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಜನಾರ್ದನ ಪೂಜಾರಿಯವರ ಕಚೇರಿಯಲ್ಲಿ ಇತ್ತೀಚಿನ ದಿನಗಳ ವರೆಗೂ ಕರ್ತವ್ಯ ನಿರ್ವಹಿಸಿದ್ದ ಇವರು ಕಳೆದ ಕೆಲ ದಿನಗಳಿಂದ ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಇದೀಗ ಅವರು ಮೃತಪಟ್ಟಿದ್ದಾರೆ. ಮೃತರ ಕುಟುಂಬವರ್ಗಕ್ಕೆ ಈ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಮಂಗಳೂರು ವಕೀಲರ ಸಂಘ ಸಂತಾಪ ಸೂಚಿಸಿದೆ.

Edited By : Nagaraj Tulugeri
Kshetra Samachara

Kshetra Samachara

15/01/2022 10:09 pm

Cinque Terre

12.38 K

Cinque Terre

0