ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಬೈ- ಮಂಗಳೂರು ' ಇಂಡಿಗೋ' ವಿಮಾನ ಯಾನ; ತುಳುಭಾಷೆಯಲ್ಲಿ ಮೊಳಗಿದ ಅನೌನ್ಸ್ ಮೆಂಟ್ !

ಮಂಗಳೂರು: ಮುಂಬೈ - ಮಂಗಳೂರು ಪ್ರಯಾಣದ ವೇಳೆ ಇಂಡಿಗೋ ಏರ್ ಲೈನ್ಸ್ ನ ವಿಮಾನದ ಫಸ್ಟ್ ಆಫೀಸರ್ ತುಳು ಭಾಷೆಯಲ್ಲಿ ಮಾಡಿರುವ ಅನೌನ್ಸ್ ಮೆಂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಂಬೈ ನಿಂದ ಮಂಗಳೂರಿಗೆ ಪ್ರಯಾಣಕ್ಕೆ ಸಿದ್ಧವಾಗಿದ್ದ ಇಂಡಿಗೋ ವಿಮಾನದಲ್ಲಿ ಪೈಲೆಟ್ ಪ್ರದೀಪ್ ಪದ್ಮಶಾಲಿ ಎಂಬವರು ಪ್ರಕಟಣೆಯನ್ನು ಬರೆದು, ತುಳುವಿನಲ್ಲಿ ಓದಿ ಹೇಳಿದ್ದಾರೆ. ಈ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೇಶದಲ್ಲಿನ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕ ಹಾಗೂ ಸಾರ್ವಜನಿಕ ಪ್ರಕಟಣೆಯನ್ನು ಮೊದಲು ಸ್ಥಳೀಯ ಭಾಷೆಯಲ್ಲಿ ಹೊರಡಿಸಿ ಅನಂತರ ಹಿಂದಿ ಹಾಗೂ ಇಂಗ್ಲಿಷ್‍ನಲ್ಲಿ ಮಾಡಬೇಕು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಆದೇಶವಿದೆ.

ಈ ಪ್ರಕಾರ ವಿಮಾನ ನಿಲ್ದಾಣಗಳಲ್ಲಿನ ಎಲ್ಲ ಮೌಖಿಕ ಪ್ರಕಟಣೆಗಳನ್ನು ಮೊದಲು ಸ್ಥಳೀಯ ಭಾಷೆಯಲ್ಲಿಯೇ ಅನೌನ್ಸ್ ಮಾಡಬೇಕಾಗಿದೆ.

Edited By : Nagesh Gaonkar
Kshetra Samachara

Kshetra Samachara

25/12/2021 08:27 pm

Cinque Terre

9.19 K

Cinque Terre

5