ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಕಳತ್ತೂರಿನ ಯೋಧ ಜಾರ್ಖಂಡ್ ನಲ್ಲಿ ಹೃದಯಾಘಾತದಿಂದ ಸಾವು

ಕಾಪು: ಕಾಪು ತಾಲೂಕು ಕಳತ್ತೂರು ಚಂದ್ರನಗರ ಕನ್ನಡರಬೆಟ್ಟು ನಿವಾಸಿ ನವೀನ್ ಕುಮಾರ್ ಕರ್ಕಡ (50) ಅವರು ಜಾರ್ಖಂಡ್ ನಲ್ಲಿ ಸೇನಾ ಕರ್ತವ್ಯದಲ್ಲಿರುವಾಗಲೇ ಹೃದಯಾಘಾತದಿಂದಾಗಿ ಮೃತಪಟ್ಟ ಘಟನೆ ನಿನ್ನೆ (ಶನಿವಾರ) ನಡೆದಿದೆ.

ಸಿಐಎಸ್ಎಫ್ ಯೋಧರಾಗಿ ಕಳೆದ 29 ವರ್ಷಗಳಿಂದ ಸೇನಾ ಕರ್ತವ್ಯ ನಿರತರಾಗಿದ್ದ ಅವರು, ಮುಂದಿನ ವರ್ಷ ಕರ್ತವ್ಯದಿಂದ ನಿವೃತ್ತಿ ಹೊಂದುವವರಿದ್ದರು.

ಬಿಹಾರ, ರಾಂಚಿ, ದೆಹಲಿ, ಮೈಸೂರು, ನಾಗ್ಪುರ ಸಹಿತ ದೇಶದ ವಿವಿಧೆಡೆಗಳ ಸೇನಾ ನೆಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಜಾರ್ಖಂಡ್ ಸೇನಾ‌ ನೆಲೆಯಿಂದ ಕೋಲ್ಕತ್ತಾ, ಮುಂಬಯಿ ಮಾರ್ಗ ಮೂಲಕವಾಗಿ ಮಂಗಳೂರು ವಿಮಾನ ನಿಲ್ದಾಣದಿಂದ ಮೃತದೇಹವನ್ನು ಮನೆಗೆ ತರಲಾಗಿದ್ದು, ಇಂದು ಸಂಜೆ ಪಾದೂರು ಚರ್ಚ್ ನಲ್ಲಿ ಅಂತಿಮ ವಿಧಿ ವಿಧಾನ ನೆರವೇರಲಿದೆ. ಅವರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರು ಇದ್ದಾರೆ.

Edited By : Shivu K
Kshetra Samachara

Kshetra Samachara

07/11/2021 05:56 pm

Cinque Terre

17.27 K

Cinque Terre

2