ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ ತಾಲೂಕಿಗೆ ನ್ಯಾಯಾಲಯದ ಬೇಡಿಕೆ ಅನುಷ್ಠಾನಗೊಳ್ಳಬೇಕು: ಹರಿಕೃಷ್ಣ ಪುನರೂರು

ಮುಲ್ಕಿ: ಮುಲ್ಕಿ ನಾಗರಿಕ ಸಮಿತಿ ವತಿಯಿಂದ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡ ಮುಮ್ತಾಜ್ ಅವರಿಗೆ ಗೌರವಾರ್ಪಣೆ ಕಾರ್ಯಕ್ರಮ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, 'ಮುಲ್ಕಿ ತಾಲೂಕು ಅನೇಕ ಅಭಿವೃದ್ಧಿಗಳಿಂದ ವಂಚಿತವಾಗಿದೆ. ಶೀಘ್ರ ನ್ಯಾಯಾಲಯದ ಬೇಡಿಕೆ ಅನುಷ್ಠಾನಗೊಳ್ಳುವ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕುವಂತಾಗಬೇಕು' ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮುಲ್ಕಿ ತಹಶೀಲ್ದಾರ್ ಕಮಲಮ್ಮ, ಕೆನರಾ ಬ್ಯಾಂಕ್ ಮೆನೇಜರ್ ರಮ್ಯಾ ರೆಡ್ಡಿ, ನ್ಯಾಯವಾದಿ ಭಾಸ್ಕರ ಹೆಗ್ಡೆ, ಸಾಮಾಜಿಕ ಕಾರ್ಯಕರ್ತೆ ಶಮಿನಾ ಆಳ್ವ, ನಿವೃತ್ತ ಉಪನ್ಯಾಸಕ ಸ್ಯಾಮ್ ಮಾಬೆನ್, ವಕೀಲ ರವೀಶ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡ ಮುಮ್ತಾಜ್ ರವರನ್ನು ಗೌರವಿಸಲಾಯಿತು. ಸನ್ಮಾನ ಗೌರವಕ್ಕೆ ಉತ್ತರಿಸಿ ಮುಮ್ತಾಜ್ ಮಾತನಾಡಿ, ಮುಲ್ಕಿ ನಾಗರಿಕರ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿಯಾಗಿದ್ದು ಎಲ್ಲರಿಗೂ ನ್ಯಾಯ ದೊರಕಿಸಲು ಪ್ರಯತ್ನಿಸುತ್ತೇನೆ ಹಾಗೂ ಮುಲ್ಕಿಗೆ ನ್ಯಾಯಾಲಯದ ಬೇಡಿಕೆ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಮುಲ್ಕಿ ವಿಜಯ ಕಾಲೇಜು ಪದವಿ ಪೂರ್ವ ಪ್ರಾಚಾರ್ಯ ಫಮೀದಾ ಬೇಗಂ, ಕಿಲ್ಪಾಡಿ ಗ್ರಾ.ಪಂ ಉಪಾಧ್ಯಕ್ಷ ಗೋಪಿನಾಥ ಪಡಂಗ, ಪೂರ್ಣೇಶ್, ಡಾ.ಹರಿಶ್ಚಂದ್ರ ಸಾಲ್ಯಾನ್, ಸಾಧು ಅಂಚನ್, ಲ.ಪ್ರತಿಭಾ ಹೆಬ್ಬಾರ್, ರೇಷ್ಮಾ ಹಳೆಯಂಗಡಿ ಮತ್ತಿತರರು ಮಾತನಾಡಿದರು.

Edited By : PublicNext Desk
Kshetra Samachara

Kshetra Samachara

29/10/2021 06:53 pm

Cinque Terre

5.37 K

Cinque Terre

0