ಮಂಗಳೂರು: ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದಿಂದ foscos.fssi.gov.in ನೂತನ ವೆಬ್ ಸೈಟ್ ಅನಾವರಣವಾಗಿದ್ದು, ಇನ್ನು ಮುಂದೆ ಎಲ್ಲರೂ ಆಹಾರ ಉದ್ದಿಮೆ ಪರವಾನಗಿಗೆ ಈ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು ಎಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ದ.ಕ. ಜಿಲ್ಲಾ ಅಂಕಿತಾಧಿಕಾರಿ ಡಾ.ಪ್ರವೀಣ್ ಕುಮಾರ್ ಸಿ.ಎಚ್. ಹೇಳಿದರು.
ಈ ವೆಬ್ ಸೈಟ್ ನಲ್ಲಿ ಸೈನ್ ಅಪ್ ಆದ ಬಳಿಕ ಯೂಸರ್ ಐಡಿ, ಪಾಸ್ ವರ್ಡ್ ಪಡೆದು ಅರ್ಜಿ ಸಲ್ಲಿಸಬಹುದು. ಬಳಿಕ ಡಾಕ್ಯುಮೆಂಟ್ ಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬಹುದು. ಪರವಾನಗಿಯನ್ನು ಆನ್ ಲೈನ್ ಮೂಲಕವೇ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದ್ದು, ಆದ್ದರಿಂದ ಯಾರೂ ಕಚೇರಿಗೆ ಆಗಮಿಸುವ ಅಗತ್ಯವಿಲ್ಲ. ಕ್ಯೂಆರ್ ಕೋಡ್ ಡಿಜಿಟಲ್ ಸಹಿ ಇರುವುದರಿಂದ ಯಾವ ಅಧಿಕಾರಿಗಳ ಸಹಿಯ ಅಗತ್ಯವೂ ಇಲ್ಲ. ಆನ್ ಲೈನ್ ಅರ್ಜಿ ಹಾಕುವಾಗ ಸಮಸ್ಯೆಯಾದಲ್ಲಿ ಮೊಬೈಲ್ ಸಂಖ್ಯೆ- 8217749481ಗೆ ಕರೆ ಮಾಡಬಹುದು ಎಂದರು.
ಚಲನ್ ಪಾವತಿ ಮಾಡುವ ಅವಶ್ಯಕತೆ ಇಲ್ಲ. ಆನ್ ಲೈನ್ ಅರ್ಜಿ ಹಾಕುವ ಸಂದರ್ಭ ಕೊನೆಗೆ ರೇಸರ್ ಪೇ ಎಂದು ಬರುವಲ್ಲಿ ಡೆಬಿಟ್ ಕಾರ್ಡ್ ಅಥವಾ ಯುಪಿಐ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಡಾ.ಪ್ರವೀಣ್ ಕುಮಾರ್ ತಿಳಿಸಿದರು.
Kshetra Samachara
07/01/2021 04:45 pm