ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್ : ಹುತಾತ್ಮ ದೀಪಕ್ ರಾವ್ ಮನೆಯಲ್ಲಿ ಶಾಸಕ ಡಾ.ಭರತ್ ಶೆಟ್ಟಿ ಶ್ರದ್ಧಾಂಜಲಿ ಅರ್ಪಣೆ

ಮುಲ್ಕಿ: ಭಾರತೀಯ ಜನತಾ ಪಾರ್ಟಿಯ ನಿಷ್ಠಾವಂತ ಕಾರ್ಯಕರ್ತರಾಗಿದ್ದ, ದೇಶಪ್ರೇಮಿ ಯುವಕ ದೀಪಕ್ ರಾವ್ ಮತಾಂಧರ ರಕ್ತದಾಹಕ್ಕೆ ಬಲಿಯಾಗಿ ಇವತ್ತಿಗೆ ಮೂರು ವರ್ಷ ಸಂದಿದ್ದು,

ದಿವಂಗತ ದೀಪಕ್ ರಾವ್ ಕುಟುಂಬದೊಂದಿಗೆ ಆರಂಭದಿಂದಲೂ ನಿಕಟ ಸಂಪರ್ಕದಲ್ಲಿರುವ ಡಾ.ಭರತ್ ಶೆಟ್ಟಿಯವರು ಕಾಟಿಪಳ್ಳದಲ್ಲಿರುವ ದೀಪಕ್ ಅವರ ಮನೆಗೆ ತೆರಳಿ ಭಾವಚಿತ್ರಕ್ಕೆ ಹೂ ಹಾರ ಹಾಕಿ ವೀರಪುತ್ರನನ್ನು ಕಳೆದುಕೊಂಡ ತಾಯಿಯ ಕಾಲಿಗೆ ನಮಸ್ಕರಿಸಿ, ಸಾಂತ್ವನ ಹೇಳಿ ಕುಟುಂಬದೊಂದಿಗೆ ಕೆಲ ಹೊತ್ತು ಕಳೆದರು.

ಶಾಸಕರೊಂದಿಗೆ ಮನಪಾ ಸದಸ್ಯರಾದ ಲೋಕೇಶ್ ಬೊಳ್ಳಾಜೆ, ಯುವಮೋರ್ಚಾ ಅಧ್ಯಕ್ಷ ಭರತರಾಜ್ ಕೃಷ್ಣಾಪುರ, ಇನ್ನಿತರ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

03/01/2021 01:41 pm

Cinque Terre

16.51 K

Cinque Terre

3