ಮೂಡುಬಿದಿರೆ: ಮೂಡುಬಿದಿರೆ ನಯನ್ ಬೇಕರಿಯಲ್ಲಿ ಚಹಾ ಹಾಗೂ ಕಾಫಿಯನ್ನು ವಿತರಿಸಲು ಏಕ ಬಳಕೆಯ ಪೇಪರ್ ಹಾಗೂ ಪ್ಲಾಸ್ಟಿಕ್ ಲೋಟಗಳ ಬದಲಿ ವ್ಯವಸ್ಥೆಯಾಗಿ ತೆಂಗಿನಕಾಯಿ ಗೆರಟೆಯನ್ನು ಬಳಸುವ ವಿನೂತನ ಕಾರ್ಯಕ್ರಮಕ್ಕೆ ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಚಾಲನೆಯನ್ನು ನೀಡಿದರು.
ನಂತರ ಮಾತನಾಡಿದ ಪ್ರಸಾದ್ ಕುಮಾರ್ ಅವರು ಗೆರಟೆ ಬಳಕೆ ಬಹುಷಃ ದೇಶದಲ್ಲೇ ಮೊದಲನೇ ಬಾರಿಯಾಗಿದೆ. ಜನರು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು ಆ ಮೂಲಕ ಮರುಬಳಕೆಯ ವಸ್ತುಗಳು ಬರಬೇಕು ಅಥವಾ ಗ್ಲಾಸ್, ಫೈಬರ್ ವಸ್ತುಗಳು ಬರಬೇಕು. ಗೆರಟೆಯ ಬಳಕೆ ಹೆಚ್ಚಾದರೆ ಪರಿಸರ ಮಾಲಿನ್ಯ ವಾಗದಂತೆ ಕಾಪಾಡಿ ಕೊಳ್ಳಬಹುದು.
ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ. ವಾರ್ಡ್ ಸದಸ್ಯಾ ರಾಜೇಶ್ ನಾಯ್ಕ್ , ಪರಿಸರ ಅಭಿಯಂತರೆ ಶಿಲ್ಪ ಉಪಸ್ಥಿತರಿದ್ದು ನಯನ್ ಬೇಕರಿ ಕೈಗೊಂಡಿರುವ ವಿನೂತನ ಕಾರ್ಯವನ್ನು ಪ್ರೋತ್ಸಾಹಿಸಿದರು.
ನಯನ್ ಬೇಕರಿ ಮಾಲಕ ನೆಲ್ವಿಸ್ಟಾರ್ ಮಾತನಾಡಿ, ಗೆರೆಟೆಯಲ್ಲಿ ಟೀ-ಕಾಫಿ ಕುಡಿಯಲು ಉತ್ತೇಜನ ನೀಡಿದವರೇ ಜೈನ್ ಪಿಯು ಕಾಲೇಜಿನ ಉಪನ್ಯಾಸಕಿ ಸಂಧ್ಯಾ ಹಾಗೂ ಪುರಸಭೆಯ ಅಧ್ಯಕ್ಷರು, ಸದಸ್ಯರು,ಅಧಿಕಾರಿಗಳು ಪ್ರೊತ್ಸಾಹ ನೀಡಿರುವುದರಿಂದ ಗೆರಟೆಯಲ್ಲಿ ಟೀ-ಕಾಫಿ ಅಭಿಯಾನಕ್ಕೆ ಜನರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಇದೇ ರೀತಿ ಎಲ್ಲಾ ಬೇಕರಿ, ಹೋಟೆಲ್ ಗಳಲ್ಲಿ ಪ್ಲಾಸ್ಟಿಕ್ ಕಪ್ ಗಳನ್ನು ಬಳಸುವ ಬದಲು ಗೆರಟೆಯನ್ನು ಬಳಕೆ ಮಾಡಿದರೆ ಪರಿಸರ ಮಾಲಿನ್ಯವನ್ನು ಅಲ್ಪ ಮಟ್ಟಿನಲ್ಲದರೂ ತಡೆಯಬಹುದು ಎಂದು ತಿಳಿಸಿದರು.
ಸ್ಚಚ್ಛತಾ ರಾಯಭಾರಿ ಸಂಧ್ಯಾ ಅವರು ಉಪಸ್ಥಿತರಿದ್ದರು.
PublicNext
17/09/2022 04:07 pm