ಮೂಡುಬಿದಿರೆ : ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಶ್ರೀ ಮಹಾವೀರ ಪ.ಪೂ. ಕಾಲೇಜಿನ ಜಂಟಿ ಆಶ್ರಯದಲ್ಲಿ ದ.ಕ.ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟವು ಶ್ರೀ ಮಹಾವೀರ ಕಾಲೇಜಿನ ಕ್ರೀಡಾಂಗಣದಲ್ಲಿ ಬುಧವಾರ ನಡೆಯಿತು. ಚೌಟರ ಅರಮನೆಯು ಕುಲದೀಪ್ ಎಂ. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶ್ರೀ ಮಹಾವೀರ ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂಪತ್ತ್ ಸಾಮ್ರಾಜ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶಿಯ ಕ್ರೀಡೆಯಾಗಿರುವ ಕಬಡ್ಡಿಗೆ 2014ರಲ್ಲಿ ಆರಂಭಗೊಂಡ ಪ್ರೋ ಕಬಡ್ಡಿಯ ಮೂಲಕ ಹೆಚ್ಚಿನ ಮಾನ್ಯತೆ ದೊರಕಿದೆ ಇದರಿಂದಾಗಿ ಯುವಜನತೆಯಲ್ಲಿ ಆಸಕ್ತಿ ಹೆಚ್ಚಾಗಿದೆ. ಹಿಂದೆ ಮಣ್ಣಿನ ನೆಲದಲ್ಲಿ ಆಟವಾಡುತ್ತಿದ್ದಾಗ ಬಿದ್ದು ಗಾಯಗಳಾಗುತ್ತಿತ್ತು.
ಆದರೆ ಇದೀಗ ಮ್ಯಾಟ್ ಹಾಕಿ ಆಡುವುದರಿಂದ ಇಂತಹ ಸಮಸ್ಯೆಗಳಿಲ್ಲ ಎಂದರು.
ಉದ್ಯಮಿ ಅಬುಲ್ ಅಲಾ ಪುತ್ತಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶ್ರೀ ಮಹಾವೀರ ಕಾಲೇಜು ಟ್ರಸ್ಟ್‌ನ ಕಾರ್ಯದರ್ಶಿ ಡಾ.ರಾಧಾಕೃಷ್ಣನ್ ಶೆಟ್ಟಿ, ಎಂ.ಕೆ. ಎ.ಸಿ. ಪಿ.ಇಡಿಯ ಪ್ರಾಂಶುಪಾಲ ದನಂಜಯ ಶೆಟ್ಟಿ, ದ.ಕ. ಪ.ಪೂ.ಕಾಲೇಜುಗಳ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಮೊಗರೋಡಿ, ಮೂಡುಬಿದಿರೆ ತಾಲೂಕು ಕ್ರೀಡಾ ಸಂಯೋಜಕ ನವೀನ್ ಉಪಸ್ಥಿತರಿದ್ದರು.
Kshetra Samachara
14/09/2022 02:17 pm