ಮೂಡುಬಿದಿರೆ : ಕರಾಟೆ ಆತ್ಮರಕ್ಷಣೆಯ ಕಲೆ. ಆರೋಗ್ಯಪೂರ್ಣ ಬದುಕಿಗೆ ಇದು ಪೂರಕ. ಎಲ್ಲಾ ಶಾಲೆಗಳಲ್ಲಿಯೂ ಕರಾಟೆ ತರಗತಿಗಳು ನಡೆಯಬೇಕು ಎಂದು ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿದರು.
ಶೊರಿನ್ ರಿಯೂ ಕರಾಟೆ ಅಸೋಸಿಯೇಶನ್ ಸಂಯೋಜನೆಯಲ್ಲಿ ಎಂ.ಕೆ. ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜು, ಸ್ವಾಮೀಸ್ ಸ್ಟ್ರೆಂಥ್ ಸೆಂಟರ್ ಸಹಯೋಗದಲ್ಲಿ ಸಮಾಜಮಂದಿರದಲ್ಲಿ ಶನಿವಾರ ನಡೆದ 19ನೇ ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್‌ನ್ನು ಉದ್ಘಾಟಿಸಿ ಮಾತನಾಡಿದರು.
ಪುರಸಭಾಧ್ಯಕ್ಷ ಪ್ರಸಾದ್‌ಕುವಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉದ್ಯಮಿ ಅಬುಲ್ ಆಲಾ ಪುತ್ತಿಗೆ, ರೋಟರಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಪ್ರವೀಣ್‌ಚಂದ್ರ ಜೈನ್ ಮಾತನಾಡಿ ಶುಭ ಹಾರೈಸಿದರು. ಅತಿಥಿಗಳಾಗಿ ಉದ್ಯಮಿಗಳಾದ ಸಿ.ಎಚ್. ಅಬ್ದುಲ್ ಗಫೂರ್, ಮಹಮ್ಮದ್ ಶರೀಫ್, ಪ್ರೆಸ್ ಕ್ಲಬ್ ನ ಮಾಜಿ ಅಧ್ಯಕ್ಷ ಬಿ. ಸೀತಾರಾಮ ಆಚಾರ್ಯ ಭಾಗವಹಿಸಿದ್ದರು.
ವೇದಿಕೆಯಲ್ಲಿ ಶೂರಿನ್ ರಿಯೂ ಕರಾಟೆ ಅಸೋಸಿಯೇಶನ್‌ನ ಮುಖ್ಯ ಶಿಕ್ಷಕ ಮಹಮ್ಮದ್ ನದೀಂ, ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್‌ನ ಸ್ವಾಮಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ಎಂ.ಕೆ. ಅನಂತ್ರಾಜ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಧನಂಜಯ ಶೆಟ್ಟಿ
ಸ್ವಾಗತಿಸಿ, ದೈಹಿಕ ಶಿಕ್ಷಕ ನವೀನ್ ಅಂಬೂರಿ ನಿರೂಪಿಸಿದರು. ರಾಜ್ಯದ ವಿವಿಧ ವಿಭಾಗಗಳಿಂದ 600ಕ್ಕೂ ಅಧಿಕ ಕರಾಟೆಪಟುಗಳು ಭಾಗವಹಿಸಿದ್ದರು.
Kshetra Samachara
10/09/2022 07:45 pm