ಬಜಪೆಯಿಂದ ಕೈಕಂಬಕ್ಕೆ ಸಾಗುವಂತಹ ರಾಜ್ಯ ಹೆದ್ದಾರಿಯ ಪಡು ಪೆರಾರ ಗ್ರಾಮ ಪಂಚಾಯತ್ ನ ಸಮೀಪ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಹೊಂಡವೊಂದು ಉಂಟಾಗಿ ತಿಂಗಳುಗಳು ಕಳೆದರೂ ಹೊಂಡವನ್ನು ಮುಚ್ಚುವ ಕಾರ್ಯಕ್ಕೆ ಮಾತ್ರ ಸಂಬಂಧಪಟ್ಟವರು ಮುಂದಾಗಿಲ್ಲ.
ಪಡುಪೆರಾರ ಗ್ರಾಮ ಪಂಚಾಯತ್ ನ ಸಮೀಪದಿಂದ ಇಲ್ಲಿನ ಅಂಬಿಕಾ ನಗರದ ತನಕದ ರಸ್ತೆಯು ತೀರಾ ತಿರುವಿನಿಂದ ಕೂಡಿದ ರಸ್ತೆಯಾಗಿದೆ.ಇದೀಗ ಹೆದ್ದಾರಿಯಲ್ಲಿ ಹೊಂಡವೊಂದು ಉಂಟಾಗಿದ್ದು,ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರ ರಿಗೆ ಕಂಟಕವಾಗಿ ಪರಿಣಮಿಸಿದೆ.ಈ ಬಗ್ಗೆ ಕೂಡಲೇ ಹೆದ್ದಾರಿ ಇಲಾಖೆಯು ಇತ್ತ ಕಡೆ ಗಮನಹರಿಸಿ ಹೊಂಡವನ್ನು ಮುಚ್ಚುವ ಕಾರ್ಯವನ್ನು ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Kshetra Samachara
07/09/2022 08:27 pm