ಕುಂದಾಪುರ : ಹಬ್ಬಗಳನ್ನು ಅರಿತುಕೊಂಡು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದೊಂದಿಗೆ ಸಮಾಜದಲ್ಲಿ ಸಹಬಾಳ್ವೆಯೊಂದಿಗೆ ಬದುಕಬೇಕು ಎಂದು ಬೈಂದೂರಿನ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
ಗಂಗೊಳ್ಳಿಯ ಬಿಲ್ಲವರ ಸಮಾಜ ಸೇವಾ ಸಂಘದ ಹನ್ನೆರಡನೇ ವರ್ಷದ ವಿದ್ಯಾಗಣಪತಿ ಉತ್ಸವದ ಅಂಗವಾಗಿ ಶ್ರೀ ವೀರೇಶ್ವರ ಮಾಂಗಲ್ಯ ಮಂದಿರದಲ್ಲಿ ಗುರುವಾರ ನಡೆದ ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಂಗೊಳ್ಳಿ ಬಿಲ್ಲವರ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಬಿಲ್ಲವ ಅಧ್ಯಕ್ಷತೆವಹಿಸಿದ್ದರು. ಉಪ್ಪುಂದ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನ ಡಾ.ಗೋವಿಂದ ಬಾಬು ಪೂಜಾರಿ ಮೂವತ್ತು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿದರು. ಉದ್ಯಮಿ ಗಂಗೊಳ್ಳಿ ಸುರೇಶ ಪೂಜಾರಿ ಕೋಟೆಬಾಗಿಲುಮನೆ ಬಹುಮಾನ ವಿತರಿಸಿದರು. ವೈಷ್ಣವಿ ಗೋಪಾಲ್, ಯುವಕ ಮಂಡಲದ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ, ಮಹಿಳಾ ಘಟಕಾಧ್ಯಕ್ಷೆ ಇಂದಿರಾ ಪೂಜಾರಿ ಉಪಸ್ಥಿತರಿದ್ದರು.
ಇದೇ ಸಂದರ್ಭ ಬಿ.ಎ.ಯಲ್ಲಿ ಪ್ರಥಮ ರ್ಯಾಂಕ್ ಹಾಗೂ ಚಿನ್ನದ ಪದಕ ಗಳಿಸಿದ ವೈಷ್ಣವಿ ಗೋಪಾಲ್, ದ್ವಿತೀಯ ಪಿಯುಸಿಯಲ್ಲಿ ಎಂಟನೇ ರ್ಯಾಂಕ್ ಪಡೆದ ರಕ್ಷಿತಾ ಆರ್.ಪೂಜಾರಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ದಿಶಾ ಪೂಜಾರಿ, ಹರ್ಷಿತಾ ಪೂಜಾರಿ, ರುಚಿತಾ ಆರ್.ಪೂಜಾರಿಯವರನ್ನು ಗೌರವಿಸಿದರು.
ಸಂಘದ ಅಧ್ಯಕ್ಷ ಗೋಪಾಲ ಬಿಲ್ಲವ ಸ್ವಾಗತಿಸಿದರು. ಕೃಷ್ಣ ಪೂಜಾರಿ ಕೆಇಬಿ ಪ್ರಾಸ್ತಾವಿಸಿದರು. ಉಪನ್ಯಾಸಕ ನರೇಂದ್ರ ಎಸ್.ಗಂಗೊಳ್ಳಿ ನಿರೂಪಿಸಿದರು. ಕಾರ್ಯದರ್ಶಿ ನಾರಾಯಣ ಪೂಜಾರಿ ವಂದಿಸಿದರು.
Kshetra Samachara
06/09/2022 04:16 pm