ಉಳಾಯಿಬೆಟ್ಟು :ಶ್ರೀ ಮಹಾ ಮಾಯಿ ಸ್ಪೋರ್ಟ್ಸ್ ಕ್ಲಬ್ ಉಳಾಯಿಬೆಟ್ಟು,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಉಳಾಯಿಬೆಟ್ಟು ಒಕ್ಕೂಟ,ಲಯನ್ಸ್ ಕ್ಲಬ್ ಮಂಗಳೂರು ಕಾವೂರು,ವಿಶ್ವನಾಥ ಮಹಾಗಣಪತಿ ಭಜನಾ ಸೇವಾ ಸಮಿತಿ ಶ್ರೀ ಮಹಾ ಮಾಯಿ ಮಹಿಳಾ ಮಂಡಳಿ ಹಾಗೂ ಊರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕೆಸರ್ಡೊಂಜಿ ಕುಸಾಳ್ ಎಂಬ ತುಳುವ ಕೂಟವು ಸಾಲೆ ಶ್ರೀ ವಿಶ್ವನಾಥ ಮಹಾಗಣಪತಿ ದೇವಸ್ಥಾನದ ಎದುರು ಗದ್ದೆಯಲ್ಲಿ ಜರಗಿತು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಹರಿ ಕೇಶ ಶೆಟ್ಟಿ ನಡಿ ಗುತ್ತು ವಹಿಸಿದ್ದರು.ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ರವಿ ಮಾತನಾಡಿ ಕೆಸರಲ್ಲಿ ಔಷಧೀಯ ಅಂಶವಿದೆ ಇದು ಚರ್ಮ ರೋಗಕ್ಕೆ ರಾಮಬಾಣ,ಅಲ್ಲದೆ ಮಾನಸಿಕ ಒತ್ತಡದ ಈ ಕಾಲದಲ್ಲಿ ಇಂತಹ ಕ್ರೀಡೆಗಲಿಂದ ಮನರಂಜನೆ ದೊರಕಿ ನೆಮ್ಮದಿ ಸಿಗುತ್ತದೆ ಎಂದರು.ಸಮಾರಂಭದಲ್ಲಿ ಸಾಲೆ ಶ್ರೀ ವಿಶ್ವನಾಥ ಮಹಾಗಣಪತಿ ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀ ನಿವಾಸ ಮಾನಯ್ ಮಾಂಜ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಲಯನ್ಸ್ ಕ್ಲಬ್ ಮಂಗಳೂರು ಕಾವೂರು ಇದರ ಅಧ್ಯಕ್ಷ ವಿಕ್ಟರ್ ಮೊರಾಸ್ ಕೋಶಾಧಿಕಾರಿ ರಾಕೇಶ್ ಶೆಟ್ಟಿ,ಸತೀಶ್ ಶೆಟ್ಟಿ ಮೂಡು ಜೆಪ್ಪು ಗುತ್ತು,ಧಾರ್ಮಿಕ ಪರಿಷತ್ ಸದಸ್ಯೆ ಶ್ರೀಮತಿ ಶಶಿಕಲಾ, ಮಹಾ ಮಾಯಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮುಕೇಶ್ ಕಾಂತಾರ ಬೆಟ್ಟು,ಉಳಾಯಿಬೆಟ್ಟು ಒಕ್ಕೂಟದ ಅಧ್ಯಕ್ಷ ಸತೀಶ್ ಶೆಟ್ಟಿ ಸಾಲೆ, ಬಿರ್ಮನ ಬಂಗೇರ,ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ,ಮಹಿಳೆಯರಿಗೆ,ಹಾಗೂ ಗಂಡಸರಿಗೆ ಪ್ರತ್ಯೇಕವಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಕೆಸರಿನ ಗದ್ದೆಯಲ್ಲಿ ಆಯೋಜಿಸಲಾಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಮಾಜಿ ಗೌರವ ಅಧ್ಯಕ್ಷ ಮಾಜಿ ಗ್ರಾಮಪಂಚಾಯತಿ ಅಧ್ಯಕ್ಷ ರಾಜೀವ ಶೆಟ್ಟಿ ಸಲ್ಲಾಜೇ ವಹಿಸಿದ್ದರು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.
Kshetra Samachara
16/08/2022 05:27 pm