ಬಜಪೆ : ಸಾರ್ವಜನಿಕ ಗ್ರಂಥಾಲಯ ಇಲಾಖೆ ಮಂಗಳೂರು ,ಶಾಖಾ ಗ್ರಂಥಾಲಯ ಬಜಪೆ ವತಿಯಿಂದ ಗ್ರಂಥಾಲಯ ಪಿತಾಮಹ ಡಾ.ಎಸ್.ಅರ್ ರಂಗನಾಥನ್ ಅವರ 130ನೇ ಜನ್ಮಾದಿನಾಚರಣೆಯನ್ನು ಬಜಪೆಯ ಪಟ್ಟಣ ಪಂಚಾಯತ್ ನ ಸಮುದಾಯ ನ ಭವನದಲ್ಲಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಗ್ರಂಥಾಲಯದ ಹಿರಿಯ ಓದುಗರ ರಾದ ಭವಾನಿ ಹಾಗೂ ಸಾವಿತ್ರಿ ಆಚಾರ್ಯ ಅವರನ್ನು ಸನ್ಮಾನಿಸಲಯಿತು.
ಈ ಸಂದರ್ಭ ಬಜಪೆ ಪಟ್ಟಣ ಪಂಚಾಯತ್ ನ ಮುಖ್ಯಾಧಿಕಾರಿ ಪೂರ್ಣಕಲಾ ವೈ.ಕೆ,ಗ್ರಂಥ ಪಾಲಕಿ ಹೇಮಲತಾ,ಬಜಪೆ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷೆ ರೋಝಿ ಮಥಾಯಿಸ್,ಮಳವೂರು ಗ್ರಾಮ ಪಂಚಾಯತ್ ನ ಮಾಜಿ ಸದಸ್ಯ ರಾಜೇಶ್ ಅರ್ ಅಮೀನ್,ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಾಯಕಿ ಸಾವಿತ್ರಿ, ಕಂದಾವರ ಗ್ರಾಮ ಪಂಚಾಯತ್ ನ ಸದಸ್ಯೆ ವಿಜಯ ಗೋಪಾಲ ಸುವರ್ಣ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
13/08/2022 11:15 am