ಬಜಪೆ:ತುಳುನಾಡಿನಲ್ಲಿ ಇಂದಿಗೂ ಕೆಲವೊಂದು ಆಚರಣೆ,ಪದ್ದತಿಗಳು ಸಂಪ್ರದಾಯ ಬದ್ದವಾಗಿ ನಡೆಯುತ್ತಲೆ ಬಂದಿದೆ.ಇಂತಹ ಪದ್ದತಿಗಳಲ್ಲಿ ಆಟಿ ತಿಂಗಳಲ್ಲಿ ನಡೆಯುವಂತಹ 'ಕುಲೆ ಮದಿಮೆ'ಯು ತುಳುನಾಡಿನ ವಿಶೇಷ.ಕುಲೆ ಮದುಮೆ ಎಂದರೆ ಇಬ್ಬರು ಸತ್ತವರ ಆತ್ಮಗಳ ನಡುವಿನ ಮದುವೆ ಸಂಪ್ರದಾಯವಾಗಿದೆ.
ಮದುವೆ ಅಗದೆ ಇರುವಂತಹ ಯುವಕ ಅಥವಾ ಯುವತಿ ಮರಣಹೊಂದಿದ ಅಗಲಿದ ಆತ್ಮಗಳಿಗೆ ಮದುವೆ ಮಡುವ ಪದ್ದತಿ.ಮನುಷ್ಯನು ಚಿಕ್ಕವನಾಗಿ ಸತ್ತರೆ, ಅವನ ಅಥವಾ ಅವಳ ಅತೃಪ್ತ ಆತ್ಮ ಮನೆಯವರನ್ನು ಕಾಡಲು ಪ್ರಾರಂಬಿಸುತ್ತದೆ.ಈ ಕಾರಣದಿಂದ ಈ ಕುಲೆ ಮದುವೆಗೆ ಮುಂದಾಗುತ್ತಾರೆ. ಇದಕ್ಕಾಗಿ ಬೇರೆ ಬೇರೆ ಕಡೇ ವಧು ಅಥವಾ ವರ ಅನ್ವೇಷಣೆಯಲ್ಲಿ ಆ ಕುಟುಂಬ ತೊಡಗಿಕೊಳ್ಳುತ್ತದೆ. ಈ ಸಂದರ್ಭ ಸತ್ತ ಹುಡುಗ ಅಥವಾ ಹುಡುಗಿ ಸಿಕ್ಕರೆ ಸರಿಯದ ಸಂಬಂಧ ಕೂಡಿ ಬಂದರೆ ಮದುವೆ ನಿಶ್ಚಿತಾರ್ಥ ನೆರವೇರಿಸಿ ಮದುವೆ ಮಾಡುತ್ತಾರೆ. ಇದು ಮಾಮೂಲು ಮದುವೆಯ ಎಲ್ಲಾ ಕ್ರಮವನ್ನು ಹೊಂದಿರುತ್ತದೆ.
ಇಂತಹ ಕ್ರಮವೊಂದು ಬಜಪೆ ಸಮೀಪದ ಕತ್ತಲ್ ಸಾರ್ ನಲ್ಲಿ ಕುಲೆ ಮದುವೆ ನಡೆಯಿತು. ಬಜಪೆಯ ಎಂಬ ವರನಿಗೆ ಕತ್ತಲ್ ಸಾರ್ ನ ಸುಶಿಲ ಎಂಬ ವಧುವಿನೊಂದಿಗೆ ನಡೆಯಿತು.
Kshetra Samachara
31/07/2022 05:46 pm