ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಆಳ್ವಾಸ್‌ನಲ್ಲಿ ಎರಡು ದಿನದ ಅಂತರ್ ಕಾಲೇಜು ಫೆಸ್ಟ್

ಮೂಡುಬಿದಿರೆ: ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದ ವತಿಯಿಂದ `ಅಗಾನ್ – 2022’ ಎರಡು ದಿನದ ಅಂತರಕಾಲೇಜು ಫೆಸ್ಟ್ಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರಿನ ಸಹಾಯಕ ಪೋಲಿಸ್ ಕಮಿಷನರ್ ಎಂ. ಎ ಉಪಾಸೆ ಮಾತನಾಡಿ, ಉದ್ಯಮ ಎನ್ನುವುದು ಕಾಲಕ್ಕೆ ಅನುಗುಣವಾಗಿ ಬದಲಾಗುತ್ತದೆ. ಉದ್ಯಮಿಯಾಗಬೇಕೆಂದಿರುವವರು ಮೊದಲು ಸಮಯಕ್ಕೆ ಸರಿಯಾದ ಬದಲಾವಣೆಯನ್ನು ಉದ್ಯಮ ಕ್ಷೇತ್ರದಲ್ಲಿ ತರಲು ಶಕ್ತನಾಗಿರಬೇಕು, ಆಗ ಮಾತ್ರ ಯಶಸ್ವಿ ಉದ್ಯಮಿಯಾಗಬಲ್ಲ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಐಪಿಎಸ್ ಸಂಸ್ಥೆಯ ನಿರ್ದೇಶಕ ರವಿ ಕುಮಾರ್ ಓರ್ವ ಉದ್ಯಮಿ ಮಾಡು ಇಲ್ಲವೇ ಮಡಿ ಎಂಬಂತೆ ಕಾರ್ಯಮಗ್ನನಾಗಬೇಕು. ಆಗ ಮಾತ್ರ ಸಾಧನೆಯ ಉತ್ತುಂಗಕ್ಕೇರಲು ಸಾಧ್ಯ. ಪ್ರತಿಯೊಬ್ಬ ವ್ಯಕ್ತಿಯು ಹುಟ್ಟಿನಿಂದಲೇ ಸಮಯ ಮತ್ತು ಶಕ್ತಿಯೆಂಬ ಎರಡು ವಿಶೇಷ ವರವನ್ನು ಹೊಂದಿರುತ್ತಾನೆ ಅದನ್ನು ಸಮಪರ್ಕವಾಗಿ ಬಳಸಿಕೊಂಡಾಗ ಸಾಧಕನೆಂದು ಕರೆಸಿಕೊಳ್ಳುತ್ತಾನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ ಆಳ್ವ ಹೊಸ ವ್ಯಾಪರ ಅಥವಾ ಉದ್ಯಮವನ್ನು ಪ್ರಾರಂಭಿಸುವಾಗ ಸಾಕಷ್ಟು ಬಾರಿ ಎಡುವುದು ಸಹಜ ಆದರೆ ಉದ್ಯಮಿಯ ನಿರಂತರ ಪರಿಶ್ರಮ ಯಶಸನ್ನು ತಂದುಕೊಡುತ್ತದೆ. ಉತ್ತಮ ದೃಷ್ಟಿಕೋನ ಹಾಗೂ ಸತತ ಪ್ರಯತ್ನದಿಂದ ಮುನ್ನಗುವ ಮನಸ್ಥಿತಿ ಎಲ್ಲರಲ್ಲು ಇರಬೇಕು ಎಂದರು.

ಕಾರ್ಯಕ್ರಮದಲ್ಲಿ ಲೇಖಕಿ ಜುಗಿ ನಂದಾ, ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಪ್ರಾಶುಂಪಾಲರಾದ ಡಾ.ಪೀಟರ್ ಫೆರ್ನಾಂಡೀಸ್, ಅಧ್ಯಾಪಕ ಸಂಯೋಜಕರಾದ ನೀರಜ್ ರೈ, ವಿದ್ಯಾರ್ಥಿ ಸಂಯೋಜಕರಾದ ಪ್ರೀತಿಷ್ ಕುಮಾರ್, ಉಪಸ್ಥಿತಿತರಿದ್ದರು.

ಎಂಬಿಎ ವಿಭಾಗದ ಮುಖ್ಯಸ್ಥೆ ಪ್ರೀಯಾ ಸಿಕ್ವೇರಾ ಸ್ವಾಗತಿಸಿ, ಮೇರಿ ಡಿಸೋಜಾ ವಂದಿಸಿ, ವಿದ್ಯಾರ್ಥಿನಿ ಅಂಕಿತಾ ಎಂ.ಶೆಟ್ಟಿ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

28/07/2022 08:28 pm

Cinque Terre

2.47 K

Cinque Terre

0

ಸಂಬಂಧಿತ ಸುದ್ದಿ