ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ

ಮೂಡುಬಿದಿರೆ: ಇಲ್ಲಿನ ರೋಟರಿ ಕ್ಲಬ್‌ನ 2022 ರ 23 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಿಶ್ಚಿತಾ ಟವರ್ಸ್ ಸಭಾಂಗಣದಲ್ಲಿ ನಡೆಯಿತು.

ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದ ಅವರು ಹೃದಯವಂತಿಕೆಯನ್ನು ಬೆಳೆಸಿಕೊಂಡಿರುವ ಮೂಡುಬಿದಿರೆ ಸದಸ್ಯರ ತಂಡ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುತ್ತಿರುವುದು ಶ್ಲಾಘನೀಯವಾಗಿದೆ. ಎಂದರು .

ಜುಲೈ 4ರಂದು ಮೂಡುಬಿದಿರೆ ಇದರ ಅಧ್ಯಕ್ಷ ಮಹಮ್ಮದ್ ಆರೀಫ್ ಮತ್ತು ತಂಡದ ರೋಟರಿ ಸಂಸ್ಥೆಯ ಉಪರಾಜ್ಯಪಾಲ ಮೇಜರ್ ಜನರಲ್ ಎಂ.ವಿ.ಭಟ್ ಅವರು ನೂತನ ಅಧ್ಯಕ್ಷ ಮಹಮ್ಮದ್ ಆರಿಫ್ ಮತ್ತು ಪದಾಧಿಕಾರಿಗಳಿಗೆ ಪದಗ್ರಹಣವನ್ನು ನೆರವೇರಿಸಿದರು. ವಲಯ ಸೇನಾನಿ ಏನೆಂಟ್ ಡಿಕೋಸ್ಕ ಶುಭಾಶಂಸನೆಗೈದರು.

ನೂತನ ಅಧ್ಯಕ್ಷ ಮಹಮ್ಮದ್ ಆರೀಫ್ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ಉತ್ತಮ ಸೇವಾ ಕಾರ್ಯಗಳ ಜೊತೆಗೆ ರೋಟರಿಯ ಘನತೆಯನ್ನು ಎತ್ತಿಹಿಡಿಯಲು ವರ್ಷಪೂರ್ತಿ ಶ್ರಮಿಸುತ್ತೇವೆ ಎಂದರು. ನಿರ್ಗಮನ ಅಧ್ಯಕ್ಷ ಜೆ.ಡಬ್ಲ್ಯೂ. ಪಿಂಟೋ ಅವರು ಮಾತನಾಡಿ ತಮ್ಮ ಅಧ್ಯಕ್ಷತೆಯ ಅವಧಿಯಲ್ಲಿ ಉತ್ತಮ ಸೇವಾಕಾರ್ಯಗಳನ್ನು ಹಮ್ಮಿಕೊಳ್ಳಲು ಸಹಕಾರ ನೀಡಿರುವ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಸನ್ಮಾನ: ಸಮಾಜ ಸೇವಾ ಕಾರ್ಯಕ್ರಮಗಳ ಅಂಗವಾಗಿ ಕೈಗಳೆರಡು ಇಲ್ಲದಿದ್ದರೂ ಕಾಲಿನಿಂದಲೇ ಬರೆದು ಹಲವು ಪರೀಕ್ಷೆಗಳನ್ನು ಬರೆದು ಉತ್ತಮ ಅಂಕಗಳೊAದಿಗೆ ಉತ್ತೀರ್ಣರಾಗಿರುವ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲಕಿ ಸಬಿತಾ ಮೋನಿಸ್ ಗರ್ಡಾಡಿ ಅವರನ್ನು ಸನ್ಮಾನಿಸಲಾಯಿತು. ಸಿಎಚ್, ಅಬ್ದುಲ್ ಗಫೂರ್ ಸಬಿತಾ ಮೋನಿಸ್ ಅವರನ್ನು ಅಭಿನಂದಿಸಿ ಮಾತನಾಡಿದರು.

ಸಮುದಾಯ ಸೇವಾ ಕಾರ್ಯಕ್ರಮದ ಅಂಗವಾಗಿ ಬನ್ನಡದ ಪಾಡ್ಯಾರು ಸ.ಹಿ.ಪ್ರಾ ಶಾಲೆ ಮತ್ತು ಹಂಡೇಲು ಸ.ಹಿ.ಪ್ರಾ. ಶಾಲೆಯ ಮಕ್ಕಳಿಗೆ ಶಾಲಾ ಕಲಿಕಾ ಸಾಮಗ್ರಿಗಳ ವಿತರಣೆ, ಪಾಲಡ್ಕ ಸೈಂಟ್ ಇನ್ನೇಶಿಯಸ್ ಶಾಲೆಯ ಓರ್ವ ಶಿಕ್ಷಕಿಗೆ ಒಂದು ವರ್ಷದ ಗೌರವ ಸಂಭಾವನೆ, ಮಧುಮೇಹದಿಂದ ಬಳಲುತ್ತಿರುವ ಬಾಲಕಿ ಅಕ್ಷತಾಗೆ ಇನ್ಸುಲಿನ್ ಕಿಟ್ ವಿತರಿಸಲಾಯಿತು. ಜಯರಾಮ್ ಕೋಟ್ಯಾನ್ ಸೇವಾ ಕಾರ್ಯಕ್ರಮಗಳ ವಿವರ ನೀಡಿದರು. ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ೬ ಮಂದಿ ಬಡ ವಿದ್ಯಾರ್ಥಿಗಳಿಗೆ ಶಾಲಾ ವಾರ್ಷಿಕ ಶುಲ್ಕ ವಿತರಿಸಲಾಯಿತು. ರೋಟರಿ ಆಂಗ್ಲ ಮಾಧ್ಯಮ ಶಾಲೆಯ ೧೦ ಮಂದಿ ಅರ್ಹ ವಿದ್ಯಾರ್ಥಿಗಳಿಗೆ ರಾಜೇಶ್ ಮೆಂಡಿಸ್ ಕೊಡುಗೆಯಾಗಿ ನೀಡಿರುವ ತಲಾ ರೂ. ೫೦೦೦ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಶ್ರೀಕಾಂತ್ ಕಾಮತ್ ಫಲಾನುಭವಿ ವಿದ್ಯಾರ್ಥಿಗಳ ಪಟ್ಟಿ ಓದಿದರು. ಜಿಲ್ಲಾ ಯೋಜನೆಯ ಮಾಹಿತಿ ನೀಡಿದ ಪಿ.ಕೆ. ಥೋಮಸ್ ಪ್ರಸಕ್ತ ಸಾಲಿನಲ್ಲಿ ಹಮ್ಮಿಕೊಂಡಿರುವ ಜಲಸಿರಿ-ವನಸಿರಿ ಯೋಜನೆಯ ವಿವರ ನೀಡಿದರು.

ವನಸಿರಿ ಯೋಜನೆಯಡಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸಹನಾ ನಾಗರಾಜ್, ರೋಟರಿ ಕ್ಲಬ್‌ನ ಸುವರ್ಣ ಮಹೋತ್ಸವ ವರ್ಷದ ಅಧ್ಯಕ್ಷ ಶ್ರೀಕಾಂತ್ ಕಾಮತ್ ಹಾಗೂ ರೋಟರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ನಾರಾಯಣ ಪಿ.ಎಂ. ಅವರಿಗೆ ಸಸಿಗಳನ್ನು ವಿತರಿಸಲಾಯಿತು.

ನಿರ್ಗಮನ ಕಾರ್ಯದರ್ಶಿ ಡಾ. ಆಶೀರ್ವಾದ್ ವಾರ್ಷಿಕ ವರದಿ ಓದಿದರು. ನಾಗರಾಜ್ ಬಿ. ಅವರು ಪದಗ್ರಹಣ ಅಧಿಕಾರಿ ಸುರೇಶ್ ಚೆಂಗಪ್ಪ ಅವರನ್ನು ಪರಿಚಯಿಸಿದರು. ಡಾ. ಹರೀಶ್ ನಾಯಕ್ ಅವರು ನೂತನ ಅಧ್ಯಕ್ಷ ಮಹಮ್ಮದ್ ಆರೀಫ್ ಅವರನ್ನು ಪರಿಚಯಿಸಿದರು. ರಾಜ್ಯಪಾಲ ಎಂ.ಎ. ಭಟ್ ಅವರನ್ನು ಕೇವಿನ್ ಪರಿಚಯಿಸಿದರು. ನೂತನ ಕಾರ್ಯದರ್ಶಿ ಆವಿಲ್ ಡಿಸೋಜ ಅವರನ್ನು ಸಚಿನ್ ಫೆನಾರ್‌ಂಡಿಸ್ ಪರಿಚಯಿಸಿದರು. ವಲಯ ಸೇನಾನಿ ಎನ್ಸೆಂಟ್ ಡಿಕೋಸ್ತ ಅವರನ್ನು ಡಾ. ಅರವಿಂದ ಕಿಣಿ ಪರಿಚಯಿಸಿದರು. ಕ್ಲಬ್‌ನ ಹೊಸ ಸದಸ್ಯರಾಗಿ ಪವನ್ ಪೈ ಮತ್ತು ಸುಷ್ಮಾ ಪವನ್ ಪೈ ಅವರನ್ನು ರೋಟರಿ ಕುಟುಂಬಕ್ಕೆ ಸೇರ್ಪಡೆ ಮಾಡಲಾಯಿತು. ಮಕ್ಖುಲ್ ಹುಸೇನ್, ನೂತನ ಸದಸ್ಯರನ್ನು ಪರಿಚಯಿಸಿದರು. ಜೆರಾಲ್ಡ್ ಡಿಕೋಸ್ತ ನಿರೂಪಿಸಿದ ಕಾರ್ಯಕ್ರಮದಲ್ಲಿ ಅವಿಲ್ ಡಿಸೋಜ ವಂದಿಸಿದರು.

Edited By : PublicNext Desk
Kshetra Samachara

Kshetra Samachara

13/07/2022 06:11 pm

Cinque Terre

1.38 K

Cinque Terre

0

ಸಂಬಂಧಿತ ಸುದ್ದಿ