ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ:ನಾಗರೀಕರು,ಸಂಘ ಸಂಸ್ಥೆಗಳ ಸಹಕಾರದಲ್ಲಿ ಬೃಹತ್ ಪ್ರತಿಭಟನೆ

ಬಜಪೆ:ಬಜಪೆಯ ನಾಗರಿಕರು ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬಜಪೆ ಬಸ್ಸು ನಿಲ್ದಾಣದ ಬಳಿ ಇಂದು ಬಜಪೆ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆರಿದ ನಂತರ ನಾಗರೀಕರಿಗೆ ಆದ ತೊಂದರೆಯ ಬಗ್ಗೆ ಬೃಹತ್ ಪ್ರತಿಭಟನೆ ನಡೆಯಿತು. ಮನೆ ತೆರಿಗೆ 3 ಪಟ್ಟು ಹೆಚ್ಚಳ, ವಿದ್ಯುತ್ ದರ ಏರಿಕೆ,ಕಸದ ಅವ್ಯವಸ್ಥೆ,ನೀರಿನ ದರ ಏರಿಕೆ, ಲಂಚಕ್ಕೆ ಕಡಿವಾಣ ಈ ಬಗ್ಗೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಯಿತು.ಪ್ರತಿಭಟನೆಯನ್ನು ಉದ್ದೇಶಿಸಿ ಮಾಜಿ ಗ್ರಾ.ಪಂ ಸದಸ್ಯ ಸಿರಾಜ್ ಹುಸೇನ್ ಅವರು ಮಾತನಾಡಿದರು.

ಪ್ರತಿಭಟನೆಯಲ್ಲಿ ನಾಗರೀಕ ಹಿತರಕ್ಷಣಾ ಸಮಿತಿಯ ಶಿವರಾಮ ಪೂಜಾರಿ,ರೋಬರ್ಟ್ ಫ್ರಾಂಕ್ ಲಿನ್ ಲೋಬೋ,ಮಾಧವ ಅಮೀನ್ ,ಇಸ್ಮಾಯಿಲ್ ಇಂಜೀನಿಯರ್, ದಲಿತ ಸಂಘರ್ಷ ಸಮಿತಿಯ ಪ್ರಮುಖರಾದ ದೇವದಾಸ. ಬಿ ,ರಘು ಎಕ್ಕಾರು ಹಾಗೂ ಮೊದಲಾದವರು ಪಾಲ್ಗೊಂಡರು.

Edited By : PublicNext Desk
Kshetra Samachara

Kshetra Samachara

27/06/2022 04:27 pm

Cinque Terre

3.29 K

Cinque Terre

0