ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಕ್ಕಾರು: ಹಡೀಲು ಬಿದ್ದ ಭೂಮಿಯಲ್ಲಿ ಭತ್ತದ ಬೇಸಾಯ- ಬೈ ಹುಲ್ಲು ಗೋ ಶಾಲೆಗೆ ನೀಡಿದ ಸಂಗಮದ ಸದಸ್ಯರು

ಬಜಪೆ: ಎಕ್ಕಾರು ವಿಜಯ ಯುವ ಸಂಗಮದ ಸರ್ವ ಸದಸ್ಯರೆಲ್ಲರೂ ಸೇರಿ ಕಳೆದ ಹಲವು ವರ್ಷಗಳಿಂದ ಹಡೀಲು ಬಿದ್ದ ಭೂಮಿಯಲ್ಲಿ ಭತ್ತದ ಬೇಸಾಯವನ್ನು ಮಾಡಿದ್ದು, ಇದರಿಂದ ಬಂದ ಅಕ್ಕಿಯನ್ನು ಆಶಕ್ತರಿಗೆ ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಇದೀಗ ಬೈ ಹುಲ್ಲನ್ನು ಉಚಿತವಾಗಿ ಕಿನ್ನಿಗೋಳಿ ಸಮೀಪದ ಗುತ್ತಕಾಡುವಿನ ಶಕ್ತಿ ಧಾಮ ಗೋ ಶಾಲೆಗೆ ನೀಡಿದ್ದಾರೆ. ವಿಜಯ ಯುವ ಸಂಗಮದ ಸದಸ್ಯರು ಕಳೆದ 25 ವರ್ಷಗಳಿಂದ ಸಾಮಾಜಿಕ, ಧಾರ್ಮಿಕ ಹಾಗೂ ಇನ್ನಿತರ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿ ಜನಮನ್ನಣೆಯನ್ನು ಗಳಿಸಿದ್ದಾರೆ. ಇದೀಗ ಹಡೀಲು ಬಿದ್ದ ಭೂಮಿಯಲ್ಲಿ ಭತ್ತದ ಬೇಸಾಯವನ್ನು ಬೆಳೆದು ಯಶಸ್ವಿಯನ್ನು ಕಂಡಿದ್ದಾರೆ. ಇದೀಗ ಸಂಗಮವು 26 ನೇ ವರ್ಷಕ್ಕೆ ಕಾಲಿಟ್ಟಿದ್ದು,ಇನ್ನಷ್ಟು ಧಾರ್ಮಿಕ ಹಾಗೂ ಸಮಾಜ ಮುಖಿ ಕಾರ್ಯಕ್ರಮಗಳನ್ನು ನೀಡಲಿ ಎಂಬುದು ನಮ್ಮೇಲ್ಲರ ಆಶಯವಾಗಿದೆ.

Edited By : PublicNext Desk
Kshetra Samachara

Kshetra Samachara

22/05/2022 10:07 pm

Cinque Terre

7.49 K

Cinque Terre

0