ಮಂಗಳೂರು:ನವಮಂಗಳೂರು ಬಂದರು ಅಥಾರಿಟಿ ಸಾಮಾಜಿಕ ಜವಾಬ್ದಾರಿಯ ನೆಲೆಯಲ್ಲಿ, ಸುಮಾರು 5 ಕಿಲೋ ಮೀಟರ್ ಗಳಷ್ಟು ವ್ಯಾಪ್ತಿ ಪ್ರದೇಶದಲ್ಲಿ 210 ಎಲ್ಇಡಿ ವಿದ್ಯುತ್ ಕಂಬಗಳನ್ನು ಅಳವಡಿಸಿ ಜನರಿಗೆ ಬೆಳಕಿನ ಮೂಲಕ ಸ್ಪಂದಿಸಿದೆ.ಯಾವಾಗ ಕತ್ತಲು ಇರುತ್ತದೆಯೋ ಅಂತಹ ಸಂದರ್ಭ ಬೆಳಕಿನ ಅವಶ್ಯಕತೆ ಅನಿವಾರ್ಯತೆ ನಮಗೆ ಗೊತ್ತಾಗುತ್ತದೆ. ಇದಕ್ಕೆ ಸಹಕರಿಸಿದ ಎನ್ ಎಂ ಪಿ ಟಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಅವರು ಹೇಳಿದರು.
ಅವರು ತಣ್ಣೀರುಬಾವಿ, ಬೆಂಗ್ರೆ ಮತ್ತು ಬೈಕಂಪಾಡಿ, ಮೀನಕಳಿಯ ಪ್ರದೇಶದ 5 ಕಿ.ಮೀ ವ್ಯಾಪ್ತಿಯಲ್ಲಿ ಅಳವಡಿಸಲಾದ ಎಲ್ ಇಡಿ ವಿದ್ಯುತ್ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ಎನ್ ಎಂ ಪಿ ಟಿ ಚೈರ್ ಮೆನ್ ಡಾ.ಎ.ವಿ ರಮಣ್ ಅವರು ಶಾಸಕ ಡಾ.ಭರತ್ ಶೆಟ್ಟಿಯವರ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿದರು.
ವೇದಿಕೆಯಲ್ಲಿ ಮನಪಾ ಸದಸ್ಯರಾದ ಸುಮಿತ್ರಾ, ಸುನೀತಾ, ಬಂದರು ಉಪಾಧ್ಯಕ್ಷ ಕೆ.ಜಿ ನಾಥ್ ಉಪಸ್ಥಿತರಿದ್ದರು.
Kshetra Samachara
06/05/2022 09:22 pm