ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿ.ಸಿ.ರೋಡ್ ನ ಈ ರಸ್ತೆ ಅವಸ್ಥೆ ನೋಡಿ

ಬಂಟ್ವಾಳ: ಬಿ.ಸಿ.ರೋಡ್ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಮುಂಭಾಗ ಪೋಸ್ಟ್ ಆಫೀಸ್, ಸಂಚಯಗಿರಿ, ಅಜ್ಜಿಬೆಟ್ಟು ಮೊದಲಾದ ಕಡೆಗಳಿಗೆ ತೆರಳುವ ರಸ್ತೆಯ ಹೆದ್ದಾರಿ ಪಕ್ಕದ ಭಾಗ ಅಕ್ಷರಶಃ ಕಂಬಳ ಗದ್ದೆಯಂತಾಗಿದೆ.

ಭಾನುವಾರ ಬಿ.ಸಿ.ರೋಡ್ ಪರಿಸರದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿ ಹಾಕಲಾದ ಮಣ್ಣು ಸಂಪೂರ್ಣ ರಸ್ತೆಗೆ ಬಂದಿದೆ. ಹೆದ್ದಾರಿಯಿಂದ ಪೋಸ್ಟ್ ಆಫೀಸ್ ಕಡೆಗೆ ತೆರಳುವ ಮಾರ್ಗದ ಆರಂಭಿಕ ಜಾಗದಲ್ಲೇ ಈ ಸಮಸ್ಯೆ ಇದೆ. ಹಿಂದೆ ಇದೇ ಜಾಗದಲ್ಲಿ ಪೈಪ್ ಒಡೆದು ಬಳಿಕ ಅದರ ದುರಸ್ತಿ ಕಾರ್ಯವನ್ನು ನಡೆಸಲಾಗಿತ್ತು. ಇದೀಗ ಮಳೆಯ ಆವಾಂತರದಿಂದ ಈ ಸಮಸ್ಯೆ ಕಂಡುಬಂದಿದೆ.

Edited By : PublicNext Desk
Kshetra Samachara

Kshetra Samachara

04/04/2022 08:23 pm

Cinque Terre

3.07 K

Cinque Terre

0