ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಕ್ಕಳನ್ನು ದೇವರಿಗೊಪ್ಪಿಸುವ ಹರಕೆಯ ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನದಲ್ಲಿ ಕಜಂಬು ಉತ್ಸವ

ಬಂಟ್ವಾಳ: ಕಾರಣಿಕದ ಕ್ಷೇತ್ರಗಳಲ್ಲಿ ಒಂದಾದ ಕೇಪು ಶ್ರೀ ಉಳ್ಳಾಲ್ತಿ (ದುರ್ಗಾಪರಮೇಶ್ವರಿ) ಅಮ್ಮನವರ ಸನ್ನಿಧಿಯಲ್ಲಿ ಕಜಂಬು ಉತ್ಸವ ನಡೆಯಿತು. ಉಳ್ಳಾಲ್ತಿ ದುರ್ಗಾಪರಮೇಶ್ವರಿ ದೇವಿಗೆ ಮಕ್ಕಳನ್ನು ಹರಕೆ ರೂಪದಲ್ಲಿ ಸಾಂಕೇತಿಕವಾಗಿ ಅರ್ಪಿಸಿ ಪ್ರಾರ್ಥನೆ ಸಲ್ಲಿಸುವ ಏಕೈಕ ಉಳ್ಳಾಲ್ತಿ ಕ್ಷೇತ್ರವಿದು.

ಉತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಊರ ಪರವೂರ ಭಕ್ತಾಭಿಮಾನಿಗಳು ಸಾಕ್ಷಿಯಾದರು. ದ. 15ರಂದು ಬೆಳಿಗ್ಗೆ ಕಲ್ಲಂಗಳ ದ್ವಾರದಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಿತು. ದ.16ರಂದು ಬೆಳಗ್ಗಿನಿಂದಲೇ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ ಹರಕೆಗಳನ್ನು ಒಪ್ಪಿಸಿ ದೇವರ ಪ್ರಸಾದ ಸ್ವೀಕರಿಸಿದರು.

ರಾತ್ರಿ ವಿಟ್ಲ ಅರಮನೆಯಿಂದ ಭಂಡಾರ ಹಾಗೂ ವಿಟ್ಲದ ಅರಸರಾದ ಬಂಗಾರು ಅರಸರು ಆಗಮಿಸಿದ ನಂತರ ಉತ್ಸವ ಬಲಿ ನಡೆದು ಬಳಿಕ ಮಕ್ಕಳ ಕಜಂಬು ಉತ್ಸವ ನಡೆಯಿತು. ಇದೇ ಸಂದರ್ಭದಲ್ಲಿ ಸಾವಿರಾರು ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ನಂತರ ಮುಂಜಾನೆ ನೆರಿ ಇಳಿಯುವ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಅನುವಂಶಿಕ ಆಡಳಿತದಾರ ವಿಟ್ಲ ಅರಮನೆಯ ಬಂಗಾರು ಅರಸರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

19/12/2021 09:38 am

Cinque Terre

3.43 K

Cinque Terre

0

ಸಂಬಂಧಿತ ಸುದ್ದಿ