ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರ್ಕಾರಿ ಭೂಮಿ ಪ.ಜಾತಿ, ಪಂಗಡದವರಿಗೆ ನೀಡಿ: ಅತಿಕ್ರಮಣ ಕುರಿತು ಗಮನಹರಿಸಲು ಕಾರಿಂಜ ನಿವಾಸಿಗಳ ಒತ್ತಾಯ

*ಸರ್ಕಾರಿ ಜಾಗ ಪ.ಜಾತಿ, ಪಂಗಡದವರಿಗೆ ಕಾದಿರಿಸಿ: ಕಾವಳಪಡೂರು ಗ್ರಾಮದ ಕಾರಿಂಜ ದರ್ಖಾಸು ನಿವಾಸಿಗಳ ಒತ್ತಾಯ*

ಬಂಟ್ವಾಳ: ತಾಲೂಕಿನ ಕಾವಳಪಡೂರು ಗ್ರಾಮದ ಕಾರಿಂಜ ದರ್ಖಾಸು ಎಂಬಲ್ಲಿ ಸರಕಾರಿ ಜಮೀನನ್ನು ಪ.ಜಾತಿ ಮತ್ತು ಪಂಗಡದ ವರಿಗೆ ನಿವೇಶನಕ್ಕಾಗಿ ಕಾದಿರಿಸುವಂತೆ ಸ್ಥಳೀಯ ನಿವಾಸಿಗಳಾದ ಸುಂದರ ಮುಗೇರ, ಜನಾರ್ದನ ಮತ್ತು ನಿತಿನ್ ಆಗ್ರಹಿಸಿದ್ದಾರೆ.

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಕುರಿತು ಬಂಟ್ವಾಳ ತಹಸೀಲ್ದಾರ್ ಅವರಿಗೂ ಮನವಿ ಸಲ್ಲಿಸಲಾಗಿದ್ದು, ಸರ್ಕಾರಿ ಜಮೀನನ್ನು ಖಾಸಗಿಯವರು ಸುತ್ತ ಬೇಲಿ ಹಾಕಿದ್ದು ಅದನ್ನು ತೆರವುಗೊಳಿಸಲು ಒತ್ತಾಯಿಸಿದರು. ಈ ಕುರಿತು ತಹಶೀಲ್ದಾರರು ಕೂಡ ತಮ್ಮ ಸಮಸ್ಯೆ ಆಲಿಸಬೇಕು ಎಂದು ಹೇಳಿದ ಅವರು, ಜಮೀನು ಒತ್ತುವರಿಯನ್ನು ತೆರವುಗೊಳಿಸಿ ನಿವೇಶನರಹಿತ ಎಸ್ಸಿ,ಎಸ್ಟಿ ಸಮುದಾಯಕ್ಕೆ ಹಂಚಿಕೆ ಮಾಡದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

13/10/2021 04:43 pm

Cinque Terre

18.34 K

Cinque Terre

0

ಸಂಬಂಧಿತ ಸುದ್ದಿ