ಬಂಟ್ವಾಳ: ಪಾಣೆಮಂಗಳೂರು ನಂದಾವರದಲ್ಲಿ ಶ್ರೀಕ್ಷೇತ್ರ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಳದ ಹೊರಾಂಗಣದಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡುವ ಮೂಲಕ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ) ಮೆಲ್ಕಾರ್ ಬಂಟ್ವಾಳ ಆರಂಭಗೊಂಡಿತು.
ದೇವಳದ ಪರಿಸರದಲ್ಲಿ ಹುಲ್ಲು ಹಾಗೂ ಕಸ ತೆಗೆಯುವ ಮೂಲಕ ಸದಸ್ಯರು ಪಾಲ್ಗೊಂಡರು, ಶ್ರೀ ಮಹಾಗಣಪತಿ ಹೋಮ ಮತ್ತು ಸಾಮೂಹಿಕ ಪ್ರಾರ್ಥನೆ ನೆರವೇರಿತು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಪ್ರೊ. ಎ. ವಿ. ನಾರಾಯಣ ಪ್ರತಿಷ್ಠಾನದ ಅಧ್ಯಕ್ಷರಾದ ಕೈಯೂರು ನಾರಾಯಣ ಭಟ್ ಸದಸ್ಯರಾದ ಎಂ. ಆರ್. ವಾಸುದೇವ, ಭಾಸ್ಕರ ಬಾರ್ಯ, ದುಗ್ಗಪ್ಪ .ಯನ್, ಜಯರಾಮ ಭಂಡಾರಿ, ಜಯರಾಮ ಪೂಜಾರಿ, ಬಿ.ಎಂ ಮಹಾಲಿಂಗ ಭಟ್ ಮುರಳಿಧರ ರಾವ್, ದಿವಾಕರ ಆಚಾರ್ಯ ಗೇರುಕಟ್ಟೆ, ಜಯಾನಂದ ಪೆರಾಜೆ ಉಪಸ್ಥಿತರಿದ್ದರು.ಪ್ರತಿಷ್ಠಾನದ ಪ್ರಧಾನ ಸಂಚಾಲಕ ನಾರ್ಯ ಶ್ರೀನಿವಾಸಶೆಟ್ಟಿ ಸ್ವಾಗತಿಸಿದರು. ಲೋಕೇಶ್ ಹೆಗ್ದೆ ಪುತ್ತೂರು ವಂದಿಸಿದರು.
Kshetra Samachara
16/09/2021 07:16 pm