ಕಾಪು : ಸಮಾಜ ಸೇವಾ ವೇದಿಕೆ ಕಳತ್ತೂರು-ಕಾಪು ಹಾಗೂ ಧರಣಿ ಸಮಾಜ ಸೇವಾ ಸಂಘ ಕಾಪು ವತಿಯಿಂದ ಕಾಪು ಅಕ್ಷಯಧಾರ ಬ್ಯಾಂಕ್ ಸಿಬ್ಬಂದಿ ಪಿಗ್ಮಿ ಸಂಗ್ರಾಹಕ ಮೊಹಮ್ಮದ್ ಫಾಯೀಮ್ ಅಕಾಲಿಕ ನಿಧನ ಹೊಂದಿದ್ದು ಇವರ ಆಶ್ರಯದಲ್ಲಿರುವ ಕುಟುಂಬದ ಸದಸ್ಯರಿಗೆ ರೂಪಾಯಿ ಇಪ್ಪತ್ತು ಸಾವಿರ ಚೆಕ್ (20000)ಹಾಗೂ ಪಡಿತರ ಕಿಟ್ ನೀಡಲಾಯಿತು.
ಈ ಸಂದರ್ಭದಲ್ಲಿ ಕಾಪು ಸಮಾಜ ಸೇವಾ ವೇದಿಕೆ ಅಧ್ಯಕ್ಷರಾದ ಮೊಹಮ್ಮದ್ ಫಾರೂಕ್ ಚಂದ್ರನಗರ, ಧರಣಿ ಸಮಾಜ ಸೇವಾ ಸಂಘ ಕಾಪು ಇದರ ಅಧ್ಯಕ್ಷ ಲೀಲಾದರ ಶೆಟ್ಟಿ ಕರಂದಾಡಿ ,ಸಮಾಜ ಸೇವಾ ವೇದಿಕೆ ಗೌರವ ಅಧ್ಯಕ್ಷ ದಿವಾಕರ ಬಿ ಶೆಟ್ಟಿ, ಕಳತ್ತೂರು ಸಂಚಾಲಕರಾದ ದಿವಾಕರ ಡಿ ಶೆಟ್ಟಿ ಕಳತ್ತೂರು, ಮಲಬಾರ್ ಗೋಲ್ಡ್ & ಡೈಮಂಡ್ಸ್ ಉಡುಪಿ ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್, ಮಲಬಾರ್ ಚಾರಿಟಿ ಇಂಚಾರ್ಜ್ ತಂಝೀಮ್ ಶಿರ್ವ ಹಾಗೂ ಕಾಪು ಅಕ್ಷಯಧಾರ ಬ್ಯಾಂಕ್ ನ ಅಧ್ಯಕ್ಷರಾದ ಲವ ಕರ್ಕೇರ,ಶಫಿ ನ್ಯೂಮೆನ್ಸ್ ಕಾಪು ಉಪಸ್ಥಿತರಿದ್ದರು.
Kshetra Samachara
01/09/2021 05:25 pm