ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸೌರ ಋಗುಪಾಕರ್ಮ

ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶನಿವಾರ ಸೌರ ಋಗುಪಾಕರ್ಮ ನಡೆಯಿತು. ಹೋಮದ ಬಳಿಕ ಮೊದಲಿಗೆ ದೇಗುಲದ ಗಣಪತಿ ದೇವರಿಗೆ ಯಜ್ಞೋಪವೀತವನ್ನು ತೊಡಿಸಲಾಯಿತು. ಬಳಿಕ ವಿಪ್ರರು ಯಜ್ಞೋಪವೀತವನ್ನು ಧರಿಸಿದರು. ವೇದವ್ಯಾಸ ತಂತ್ರಿ, ವಾಸುದೇವ ಆಸ್ರಣ್ಣ ಮುಂತಾದವರಿದ್ದರು.

ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಭಾಭವನ, ಎಕ್ಕಾರು ಮಠ, ಶಿಬರೂರು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ, ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಿನ್ನಿಗೋಳಿ ರಾಘವೇಂದ್ರ ಮಠ, ಅತ್ತೂರು ಬೈಲು ಶ್ರೀ ಮಹಾಗಣಪತಿ ಮಂದಿರ, ಪುನರೂರು ಶ್ರೀ ವಿಶ್ವನಾಥ ದೇವಸ್ಥಾನ, ತಾಳಿಪಾಡಿ ವೆಂಕಟರಮಣ ಮಠ, ಪಂಜ ಮಹಾಗಣಪತಿ ಮಂದಿರ, ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಗಳಲ್ಲೂ ಸೌರ ಋಗುಪಾಕರ್ಮ ನಡೆಯಿತು.

Edited By : PublicNext Desk
Kshetra Samachara

Kshetra Samachara

21/08/2021 06:36 pm

Cinque Terre

5.23 K

Cinque Terre

1