ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: "ಇಸ್ಲಾಂ ಆದರ್ಶದ ಜೊತೆ ಜೋಡಿಸಲ್ಪಟ್ಟ ಧರ್ಮ"

ಜಮಾತೆ ಇಸ್ಲಾಮಿ ಹಿಂದ್ ಸಂಘಟನೆ ಕಾಪು ಘಟಕದ ವತಿಯಿಂದ ಕಾಪುವಿನಲ್ಲಿ "ಇಸ್ಲಾಂ ಮತ್ತು ಮುಸ್ಲಿಮರನ್ನು ಅರಿಯಿರಿ" ಮಾಧ್ಯಮ ಸಂವಾದ ಜರುಗಿತು.

ಈ ಸಂದರ್ಭ ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಕುಂಞ ಮಾತನಾಡಿ, ಧರ್ಮಗಳೆಂದರೆ ಮನುಷ್ಯನಿಗೆ ಬೆಳಕು ತೋರಿಸುವ ಮಾರ್ಗ. ಇಸ್ಲಾಂ ಅಂದರೆ ಅದು ಒಬ್ಬ ವ್ಯಕ್ತಿಯೊಂದಿಗೆ ಜೋಡಿಸಲ್ಪಟ್ಟ ಧರ್ಮವಲ್ಲ, ಆದರ್ಶದ ಜೊತೆ ಜೋಡಿಸಲ್ಪಟ್ಟ ಧರ್ಮವಾಗಿದೆ. ನಮ್ಮಲ್ಲಿನ ವೈವಿಧ್ಯತೆ ಬಗ್ಗೆ ಉತ್ತಮ ಚರ್ಚೆ, ಸಂವಾದ, ವಿಷಯ ಏನಿದೆ ಎಂದು ತಿಳಿಯುವ ಪ್ರಯತ್ನ ನಡೆದರೆ ಸಮಾಜಕ್ಕೆ ದೊಡ್ಡ ಕೊಡುಗೆ ನಾವೆಲ್ಲ ಸೇರಿ ಕೊಡಬಹುದು ಎಂದರು.

ಸನ್ಮಾರ್ಗ ವಾರಪತ್ರಿಕೆ ಪ್ರಧಾನ ಸಂಪಾದಕ ಎ.ಕೆ. ಕುಕ್ಕಿಲ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುರೇಶ್ ಎರ್ಮಾಳ್, ಜಮಾತೆ ಇಸ್ಲಾಮಿ ಹಿಂದ್ ಕಾಪು ಸ್ಥಾನೀಯ ಅಧ್ಯಕ್ಷ ಅನ್ವರ್ ಆಲಿ, ಉದ್ಯಮಿ ಮುಸ್ತಾಕ್ ಅಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

07/07/2022 05:20 pm

Cinque Terre

12.52 K

Cinque Terre

0

ಸಂಬಂಧಿತ ಸುದ್ದಿ