ಕಾಪು : ವಿದ್ಯುತ್ ಅವಘಡದಿಂದ ಮುಚ್ಚಿದ ಅಂಗಡಿಯ ಒಳಗೆ ಬೆಂಕಿ ಕಾಣಿಸಿಕೊಂಡು ಅಕ್ವೇರಿಯಂಗಳ ಸಹಿತ ವಿವಿಧ ಜಾತಿಗಳ ಹಕ್ಕಿ ಸಹಿತ ವಿವಿಧ ಜಾತಿಗಳ ಮೀನುಗಳು ಬೆಂಕಿಗೆ ಅಹುತಿಯಾದ ಘಟನೆ ಪಡುಬಿದ್ರಿ ಮುಖ್ಯ ಮಾರುಕಟ್ಟೆ ರಸ್ತೆಯ ಪೊಲೀಸ್ ಠಾಣಾ ಸಮೀಪದ ಗ್ರಾ.ಪಂ. ಕಟ್ಟಡದ ಅವಿಘ್ನ ಅಕ್ವೇರಿಯಂ ಮಾರಾಟದಂಗಡಿಯಲ್ಲಿ ನಡೆದಿದೆ.
ದಿನೇಶ್ ಅವರಿಗೆ ಸೇರಿದ ಅಂಗಡಿಯಾಗಿದ್ದು ಎರಡು ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಉಡುಪಿಯಿಂದ ಬಂದ ಅಗ್ನಿ ಶಾಮಕದಳ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ಸಹಕರಿಸಿದ್ದಾರೆ.
PublicNext
10/08/2022 05:32 pm