ನಗರದ ಜೆಪ್ಪು ಕುಡ್ಪಾಡಿ ಎಂಬಲ್ಲಿನ ರೈಲ್ವೆ ಅಂಡರ್ ಪಾಸ್ ನಲ್ಲಿನ ಪಾರ್ಕಿಂಗ್ ಮಾಡಿದ್ದ ಎರಡು ಚತುಷ್ಚಕ್ರ ವಾಹನಗಳು ನಿನ್ನೆ ತಡರಾತ್ರಿ ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ.
ರಾಜೇಶ್ ಎಂಬವರಿಗೆ ಸೇರಿದ ಒಂದು ಇನ್ನೋವಾ ಕಾರು ಹಾಗೂ ಮಹೇಂದ್ರ ಜೀಪ್ ಬೆಂಕಿಗಾಹುತಿಯಾಗಿದೆ. ಯಾವ ಕಾರಣದಿಂದ ಈ ಬೆಂಕಿ ಅವಘಡ ಸಂಭವಿಸಿದೆ ಎಂದು ಇನ್ನೂ ತಿಳಿದು ಬಂದಿಲ್ಲ.
ಶಾಸಕ ವೇದವ್ಯಾಸ ಕಾಮತ್ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
27/07/2022 03:13 pm