ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಎಂಬಿಎ ಪದವೀಧರ ಯುವಕ ಈಗ ಅಪ್ಪಟ ಕೃಷಿಕ

ಕೃಷಿಯತ್ತ ಇಂದಿನ ಯುವಪೀಳಿಗೆ ಆಸಕ್ತಿಯನ್ನು ತೋರುವುದು ತೀರಾ ವಿರಳ. ಅಂತಾದ್ರಲ್ಲಿ ಇಲ್ಲೊಬ್ಬ ಎಂಬಿಎ ಪದವೀಧರ ಮಿಶ್ರ ಹಣ್ಣಿನ ಕೃಷಿಯತ್ತ ಒಲವು ತೋರಿ ಸೈ ಎನಿಸಿಕೊಂಡಿದ್ದಾರೆ.

ಹೌದು ಮೂಡುಬಿದಿರೆ ತಾಲೂಕಿನ ಬೆಳುವಾಯಿ ಪಂಚಾಯತ್ ವ್ಯಾಪ್ತಿಯ ಉಮಾನಾಥ್ ದೇವಾಡಿಗ ಅವರ ಏಕೈಕ ಪುತ್ರರಾಗಿರುವ ಅರವಿಂದ್, ಈಗ ಅಪ್ಪಟ ಕೃಷಿಕರಾಗಿದ್ದಾರೆ.

೩೦ ವರ್ಷಗಳ ಹಿಂದೆ ತಂದೆಯವರು ಸೋನ್ಸ್ ಫಾರ್ಮ್ನಿಂದ ರಂಬೂಟನ್ ಗಿಡದ ೩ ರಿಂದ ೪ ತಳಿಯನ್ನು ತಂದು ನೆಟ್ಟಿದ್ದರು. ಆ ಗಿಡದಲ್ಲಿ ಬೆಳೆದ ರಂಬೂಟನ್ ರುಚಿಯನ್ನು ಕಂಡು ತಂದೆಯವರಲ್ಲಿ ರಂಬೂಟನ್ ಕೃಷಿಯತ್ತ ಹೆಚ್ಚು ಒಲವು ಮೂಡಿತು. ನಂತರದ ದಿನಗಳಲ್ಲಿ ಅದೇ ಕೃಷಿಯನ್ನು ಇನ್ನೂ ಉತ್ತಮವಾಗಿ ಮಾಡಬೇಕೆಂಬ ನಿಟ್ಟಿನಲ್ಲಿ ಇನ್ನಷ್ಟೂ ಗಿಡಗಳನ್ನು ತಂದು ನೆಟ್ಟು ಅದರ ಪೋಷಣೆಯನ್ನು ಮಾಡಿದರು. ಬಾಲ್ಯದಿಂದಲೇ ತಂದೆಯವರ ಕೃಷಿ ಕಾಯಕ ಕಂಡ ಮಗನಿಗೂ ನಂತರ ಕೃಷಿ ಕ್ಷೇತ್ರದತ್ತ ಆಸಕ್ತಿ ಮೂಡಿತು.

ಬೇರೆ ಕೃಷಿಗೆ ಹೋಲಿಸಿದರೆ ಈ ತಳಿಗೆ ಹೆಚ್ಚು ನೀರು ಬೇಕಾಗಿರುತ್ತದೆ. ಮಳೆ ಹೆಚ್ಚು ಬೀಳುವ ಪ್ರದೇಶದಲ್ಲಿ ಈ ಗಿಡವನ್ನು ಬೆಳೆಯಲಾಗುತ್ತದೆ. ರಂಬೂಟನ್ ಗಿಡದ ಪೋಷಣೆಯ ಕೆಲಸವೂ ಹೆಚ್ಚಿದ್ದು, ಅಷ್ಟೇ ಶ್ರಮವಹಿಸಬೇಕು. ಈ ರಂಬೂಟನ್ ಹಣ್ಣನ್ನು ಇಲಿಗಳು ತಿಂದು ಹಾಕಿ ನಾಶ ಮಾಡುತ್ತವೆ. ರಂಬೂಟನ್ ಹಣ್ಣನ್ನು ಬೆಳೆದು ಅದನ್ನು ಸುರಕ್ಷಿತವಾಗಿ ಮಾರುಕಟ್ಟೆಗೆ ಮಾರಾಟ ಮಾಡುವುದೇ ಒಂದು ಸಾಹಸದ ಕೆಲಸವಾಗಿದೆ.

ಇವರು ರಂಬೂಟನ್ ಹಣ್ಣು ಮಾತ್ರವಲ್ಲದೇ, ಇದರೊಂದಿಗೆ, ಅನಾನಸ್, ಲಕ್ಷ್ಮಣ ಫಲ ಹಣ್ಣಿನ ಕೃಷಿಯನ್ನು ಮಾಡಿದ್ದಾರೆ. ಹಾಗೇ ಎಲ್ಲಾ ಯುವಕರು ಕೃಷಿಯತ್ತ ಗಮನಹರಿಸಬೇಕು ಎಂದು ಅರವಿಂದ ಸಲಹೆ ನೀಡಿದರು.

-ರಂಜಿತಾ ಮೂಡುಬಿದಿರೆ,ಪಬ್ಲಿಕ್ ನೆಕ್ಸ್ಟ್‌

Edited By :
Kshetra Samachara

Kshetra Samachara

03/08/2022 01:42 pm

Cinque Terre

24.55 K

Cinque Terre

3

ಸಂಬಂಧಿತ ಸುದ್ದಿ