ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಶಕದ ಬಳಿಕ ರಿಂಗ್ ರೋಡ್ ಅಭಿವೃದ್ಧಿಗೆ ಅಸ್ತು ಎಂದ ಸಿಎಂ

ಕುಂದಾಪುರ : ದಶಕದ ಹಿಂದೆ ನಿರ್ಮಾಣಗೊಂಡ ರಿಂಗ್ ರೋಡ್ ಪ್ರವಾಸೋದ್ಯಮ ಮತ್ತು ಸಂಪರ್ಕ ಉದ್ದೇಶದಿಂದ ಕೂಡಿದ್ದರೂ ಹದಗೆಟ್ಟ ರಸ್ತೆಯಿಂದ ಹತ್ತಾರು ಸಮಸ್ಯೆಗಳು ಎದುರಾಗಿದ್ದವು.

ಸದ್ಯ ಈ ಕುಂದಾಪುರ ರಿಂಗ್ ರೋಡ್ ಅಭಿವೃದ್ಧಿಗೆ ಹಸಿರು ನಿಶಾನೆ ಸಿಕ್ಕಿದೆ. ಮುಖ್ಯಮಂತ್ರಿ ವಿಶೇಷ ನಿಧಿಯಿಂದ ರಿಂಗ್ ರೋಡ್ ಅಭಿವೃದ್ಧಿಗೆ ಮಂಜೂರಾತಿ ದೊರಕಿದೆ.

ಕುಂದಾಪುರ ಪೇಟೆ ಸುತ್ತುವರಿದಿರುವ ರಿಂಗ್ ರೋಡ್ ದಶಕದ ಹಿಂದೆ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿತ್ತು.

ಚರ್ಚ್ ರಸ್ತೆ, ಮದ್ದುಗುಡ್ಡೆ, ಖಾರ್ವಿಕೇರಿ, ಸಂಗಮ್ ಜಂಕ್ಷನ್ ವಠಾರದ ಸಹಸ್ರಾರು ನಿವಾಸಿಗಳಿಗೆ ಸಂಪರ್ಕ ಹಾದಿ ಇದಾಗಿದ್ದು, ಕೋಡಿ-ಕುಂದಾಪುರ ನಿಕಟಗೊಳಿಸಿದೆ.

ಪ್ರತಿದಿನ ಪ್ರವಾಸಿಗರು ಇತ್ತ ಪಯಣ ಬೆಳೆಸುತ್ತಿದ್ದರೂ, ರಸ್ತೆ ದುರವಸ್ಥೆಯಿಂದ ಕಂಗೆಡುವಂತಾಗಿತ್ತು.

ನದಿಯ ಹೊಡೆತಕ್ಕೆ ಅಲ್ಲಲ್ಲಿರಿಂಗ್ರೋಡ್ ಕುಸಿದಿರುವುದರಿಂದ ನದಿಪಾತ್ರದ ನಿವಾಸಿಗಳು ಆತಂಕದ ಜೀವನ ನಡೆಸುವಂತಾಗಿತ್ತು.

ಮಳೆಗಾಲದಲ್ಲಿವಿಪರೀತ ಯಾತನೆ ಸೃಷ್ಟಿಸುತ್ತಿದ್ದ ರಿಂಗ್ ರೋಡ್ ನ ಅಭಿವೃದ್ಧಿಗೆ ನಾಗರಿಕರು ಆಗ್ರಹಿಸುತ್ತಲೇ ಬಂದಿದ್ದರು.

ಸ್ಥಳೀಯ ಶಾಸಕರ ವಿಶೇಷ ಪ್ರಯತ್ನದ ಫಲವಾಗಿ 19 ಕೋಟಿ ರೂ. ವೆಚ್ಚದಲ್ಲಿಇದೀಗ ಮುಖ್ಯಮಂತ್ರಿ ವಿಶೇಷ ನಿಧಿಯಿಂದ ಮಂಜೂರಾತಿ ದೊರಕಿದೆ.

ಅನುದಾನ ಬಿಡುಗಡೆಗೊಂಡ ಕೂಡಲೇ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ.

Edited By : Nirmala Aralikatti
Kshetra Samachara

Kshetra Samachara

05/10/2020 11:59 am

Cinque Terre

26.15 K

Cinque Terre

1