ಇಲ್ಲಿನ ಅಂಬಾಗಿಲು ಎಂಬಲ್ಕಿಯ ಅಂಗಡಿಯೊಂದರ ಮೆಟ್ಟಿಲಿನಲ್ಲಿದ್ದ ನಾಗರಹಾವಿನ ಮರಿಯನ್ನು ಉರಗ ಪ್ರೇಮಿ ಗುರುರಾಜ್ ಸನಿಲ್ ರಕ್ಷಣೆ ಮಾಡಿದ್ದಾರೆ. ಎರಡು ತಿಂಗಳ ಈ ಮರಿ ಅಂಗಡಿ ಮಳಿಗೆಯ ಮೆಟ್ಟಿಲೇರುತ್ತಿತ್ತು.
ಈ ವೇಳೆ ಅಂಗಡಿಯವರು ನೋಡಿ ಗುರುರಾಜ್ ಸನಿಲ್‌ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಬಂದ ಅವರು ಮರಿಯನ್ನು ಹಿಡಿದು ಬಾಟಲಿಯಲ್ಲಿ ಸುರಕ್ಷಿತವಾಗಿ ಕಾಡಿಗೆ ಒಯ್ದು ಬಿಟ್ಟರು. ಇದೀಗ ನಾಗರಹಾವುಗಳ ಸಂತಾನೋತ್ಪತ್ತಿ ಅವಧಿಯಾಗಿದ್ದು ಅವು ಇಪ್ಪತ್ತಕ್ಕೂ ಹೆಚ್ಚು ಮೊಟ್ಟೆಗಳನ್ನಿಡುತ್ತವೆ. ಮರಿಗಳು ಎಲ್ಲೆಂದರಲ್ಲಿ ಓಡಾಡುವ ಅವಧಿ ಇದು. ಮೊಟ್ಟೆಯಿಂದ ಹೊರಬಂದ ಮರಿಗಳ ಪೈಕಿ ಕೆಲವು ಮರಿಗಳು ಮಾತ್ರ ಉಳಿಯುತ್ತವೆ ಎಂದು ಇತ್ಯಾದಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
Kshetra Samachara
01/09/2022 07:30 pm