ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಳೆಗಾಲದ ವಿಪತ್ತು ನಿರ್ವಹಣೆಗೆ ಸ್ಥಳೀಯ 300 ಯುವಕರ ತಂಡ ರೆಡಿ!

ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮಳೆಗಾಲದಲ್ಲಿ ಜೋರಾಗಿ ಮಳೆಯಾದಾಗ ಕೆಲವೆಡೆ ಸಮಸ್ಯೆ ಎದುರಾಗೋದು ಸಾಮಾನ್ಯ. ಹೀಗಾಗಿ ವಿಪತ್ತು ನಿರ್ವಹಣೆಗೆ ಸ್ಥಳೀಯರನ್ನೇ ಸಕ್ರಿಯವಾಗಿ ಬಳಸಿಕೊಳ್ಳಲು ಜಿಲ್ಲಾಡಳಿತ ತೀರ್ಮಾನಿಸಿದೆ.

“ಅಪದ ಮಿತ್ರ’ ಯೋಜನೆಯಡಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ 300 ಸ್ವಯಂ ಸೇವಕರಿಗೆ ತರಬೇತಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೂರು ಬ್ಯಾಚ್ಗಳಲ್ಲಿ ತಲಾ 100 ಸ್ವಯಂಸೇವಕರಿಗೆ ತರಬೇತಿ ಆರಂಭವಾಗಿದೆ. ತರಬೇತಿ ಪಡೆದು ಸ್ವಯಂಸೇವಕರಿಗೆ ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಸೂಕ್ತ ಸ್ಪಂದನೆಗೆ ಬೇಕಾದ ಕಿಟ್ ಕೂಡ ನೀಡಲಾಗುತ್ತದೆ.

ವಿಪತ್ತು ಸಂಭವಿಸಿದ ಸಂದರ್ಭ ಅಗ್ನಿಶಾಮಕ ದಳದ ಸಿಬಂದಿ ಅಥವಾ ವಿಪತ್ತು ನಿರ್ವಹಣ ಘಟಕದ ಸಿಬಂದಿ, ಪೊಲೀಸ್, ಸೇನೆ ಇತ್ಯಾದಿ ತತ್ಕ್ಷಣ ಆಗಮಿಸುವುದು ಕಷ್ಟಸಾಧ್ಯ. ಸ್ಥಳೀಯರನ್ನೇ ಸಜ್ಜುಗೊಳಿಸಿದಾಗ ಆರಂಭಿಕವಾಗಿ ಏನೇನು ಮಾಡಬೇಕು ಅದನ್ನು ಅವರು ಮಾಡಲಿದ್ದಾರೆ. ಅನಂತರದಲ್ಲಿ ಭದ್ರತಾ ಸಿಬಂದಿ ಅವರೊಂದಿಗೆ ಜೋಡಿಸಿಕೊಳ್ಳಲಿದೆ. ಆದಷ್ಟು ಶೀಘ್ರದಲ್ಲಿ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುವುದರ ಜತೆಗೆ ಪ್ರಾಣಹಾನಿಯಾಗದಂತೆ ಎಚ್ಚರ ವಹಿಸುವುದು ತರಬೇತಿಯ ಮೂಲ ಉದ್ದೇಶವಾಗಿದೆ.

Edited By : Somashekar
Kshetra Samachara

Kshetra Samachara

28/06/2022 05:42 pm

Cinque Terre

8.32 K

Cinque Terre

0

ಸಂಬಂಧಿತ ಸುದ್ದಿ