ಪಡುಬಿದ್ರಿ: ಪಡುಬಿದ್ರೆಯ ಅಂತರಾಷ್ಟ್ರೀಯ ಮಾನ್ಯತೆಯ ಬ್ಲೂಫ್ಲ್ಯಾಗ್ ಬೀಚ್ ಮತ್ತೆ ಸುದ್ದಿಯಲ್ಲಿದೆ.ಈ ಬಾರಿ ಇದು ಸುದ್ದಿಯಲ್ಲಿರುವುದು ಅಕ್ರಮದ ಕಾರಣಕ್ಕೆ! ಹೌದು, ಎರಡು ವರ್ಷಗಳ ಹಿಂದೆ ಈ ಬೀಚ್‌ಗೆ ಅಂತಾರಾಷ್ಡ್ರೀಯ ಮಾನ್ಯತೆ ಸಿಕ್ಕಿದಾಗ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ಸಿಗಲಿದೆ ಎಂದೇ ಭಾವಿಸಲಾಗಿತ್ತು. ಪ್ರಾರಂಭದಲ್ಲಿ ಈ ಬೀಚ್‌ನ ಅಭಿವೃದ್ಧಿಯೂ ಆಗಿತ್ತು. ಒಂದಷ್ಟು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ಸನ್ನೂ ಕಂಡಿತ್ತು.
ಹಾಗೆ ನೋಡಿದರೆ ಕೇರಳ ಮತ್ತು ಗೋವಾ ರಾಜ್ಯಗಳು ತಮ್ಮ ಸಮುದ್ರ ಮತ್ತು ಹಿನ್ನೀರನ್ನು ಪ್ರವಾಸೋದ್ಯಮಕ್ಕೆ ಗರಿಷ್ಠ ಮಟ್ಟದಲ್ಲಿ ಬಳಸಿಕೊಂಡಿವೆ. ಆದರೆ ರಾಜ್ಯ ಕರಾವಳಿಯಲ್ಲಿ ಇದು ಇನ್ನೂ ಸಾಧ್ಯವಾಗಿಲ್ಲ.
ಇದೀಗ ಇಲ್ಲಿನ ಉದ್ಯೋಗಿಗಳು ಬ್ಲೂಫ್ಲ್ಯಾಗ್ ಬೀಚ್ ನಿರ್ವಹಣೆಯಲ್ಲಿ ಅಕ್ರಮಗಳು ನಡೆಯುತ್ತಿರುವ ಬಗ್ಗೆ ನೇರ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ . ಕಳೆದ ಒಂದೂವರೆ ವರ್ಷಗಳಿಂದ ಇಲ್ಲಿ ಕೆಲಸದ ವಾತಾವರಣ ಹದಗೆಟ್ಟಿದೆ. ಬೋಟಿಂಗ್‌ಗೆ ನಕಲಿ ರಶೀದಿಗಳನ್ನು ಮುದ್ರಿಸಿ ಹಣ ವಸೂಲು ಮಾಡಲಾಗುತ್ತಿದೆ. ವಸೂಲಾದ ಹಣವು ಪ್ರವಾಸೋದ್ಯಮ ಇಲಾಖೆಯ ಖಾತೆಗೆ ಜಮೆಯಾಗದೆ ಖಾಸಗಿ ಖಾತೆಗೆ ಜಮೆಯಾಗುತ್ತಿದೆ ಎಂದು ಇಲ್ಲಿನ ಉದ್ಯೋಗಿಗಳು ಆರೋಪಿಸಿದ್ದಾರೆ.
ಅದೇನೇ ಇರಲಿ ,ಭಾರತದ ಬೆರಳೆಣಿಕೆಯ ಬೀಚ್ ಗಳಿಗೆ ಮಾತ್ರ ಬ್ಲೂ ಫ್ಲ್ಯಾಗ್ ಬೀಚ್ ಮಾನ್ಯತೆ ಸಿಕ್ಕಿದೆ. ಜಿಲ್ಲಾಡಳಿತ ಇದೀಗ ಕೇಳಿ ಬಂದಿರುವ ಆರೋಪಗಳ ಬಗ್ಗೆ ಸಮಗ್ರ ನಡೆಸಿ ,ಈ ಬೀಚ್ ನ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
ವರದಿ: ರಹೀಂ ಉಜಿರೆ
PublicNext
10/10/2022 06:45 pm