ಮಂಗಳೂರು: ಪವಿತ್ರ ಗುಹಾಂತರ ದೇವಾಲಯ ಅಮರನಾಥದ ಗುಹೆಯ ಬಳಿಯೇ ಮೇಘಸ್ಪೋಟಗೊಂಡ ಹಿನ್ನೆಲೆಯಲ್ಲಿ ತೊಂದರೆಗೆ ಸಿಲುಕಿರುವ ದ.ಕ.ಜಿಲ್ಲೆಯ ಜನತೆಗೆ ಸಹಕರಿಸಲು ಜಿಲ್ಲಾಡಳಿತ ಸಹಾಯವಾಣಿ ತೆರೆದಿದೆ. ತೊಂದರೆಗೆ ಸಿಲುಕಿದವರು 1077 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ತಿಳಿಸಲಾಗಿದೆ.
ಅಮರನಾಥ ಗುಹೆಯ ಬಳಿಯೇ ನಿನ್ನೆ ಸಂಜೆ 5.30ರ ವೇಳೆಗೆ ಮೇಘಸ್ಪೋಟಗೊಂಡು ಯಾತ್ರಾರ್ಥಿಗಲು ತಂಗಲು ನಿರ್ಮಿಸಿರುವ ಟೆಂಟ್ ಕೊಚ್ಚಿಕೊಂಡು ಹೋಗಿದೆ. ಪರಿಣಾಮ 15ಕ್ಕೂ ಅಧಿಕ ಮಂದಿ ಮೃತಪಟ್ಟು, ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ ಹಲವಾರು ಮಂದಿ ತೊಂದರೆಗೆ ಸಿಲುಕಿದ್ದಾರೆ.
ಈ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯಿಂದ ಅಮರನಾಥ ಯಾತ್ರೆ ಕೈಗೊಂಡು ಮೇಘಸ್ಪೋಟಕ್ಕೆ ಸಿಲುಕಿರುವವರು ಅಥವಾ ಸುರಕ್ಷಿತವಾಗಿರುವ ಯಾತ್ರಾರ್ಥಿಗಳು ಯಾರಾದರೂ ಇದ್ದಲ್ಲಿ ಅವರ ಸಂಬಂಧಿಕರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.
ಮಾಹಿತಿ ನೀಡಲು ಟೋಲ್ ಫ್ರೀ ಸಂಖ್ಯೆ 1077ರ ಕರೆ ಮಾಡಿ ಸಂಬಂಧಪಟ್ಟ ಯಾತ್ರಾರ್ಥಿಗಳ ವಿವರ, ಮಾಹಿತಿಗಳನ್ನು ನೀಡುವಂತೆ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
09/07/2022 05:01 pm