ಬ್ರಹ್ಮಾವರ: ಬೈಕಾಡಿ ಸಸ್ಯಕ್ಷೇತ್ರದ ಮೂರು ಎಕರೆ ಜಾಗದಲ್ಲಿ ಅರಣ್ಯ ಇಲಾಖೆ ವತಿಯಿಂದ 25 ಜಾತಿಯ 69 ಸಾವಿರ ಸಸ್ಯಗಳು ನಾನಾ ಭಾಗದಲ್ಲಿ ಬೆಳೆಯಲು ಸಜ್ಜುಗೊಂಡು ನಿಂತಿವೆ.
ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66 ಬೈಕಾಡಿ ರಸ್ತೆಯಲ್ಲಿರುವ ಸಸ್ಯ ಕ್ಷೇತ್ರದಲ್ಲಿ ಶ್ರೀಗಂಧ, ಮಾವು, ಬೇವು, ನಾಗಲಿಂಗ ಪುಷ್ಪ, ಹೆಬ್ಬಲಸು, ಹಲಸು, ನೇರಳೆ, ಸಾಗವಾನಿ, ಕಹಿಬೇವು, ಪುನರಪುಳಿ, ಕಿರಾಲ್ ಬೋಗಿ, ಡಾಲ್ ಚೀನಿ, ನೆಲ್ಲಿ, ಮೇ ಫ್ಲವರ್ ಸೇರಿದಂತೆ ಅನೇಕ ಜಾತಿಯ ಸಸ್ಯಗಳನ್ನು ಬೆಳೆಸಲಾಗುತ್ತದೆ. ಜೂನ್ 5ರಂದು ಪರಿಸರ ದಿನಾಚರಣೆ ದಿನವಿದ್ದು, ಅಂದಿನಿಂದ ಸ್ಥಳೀಯರಿಗೂ ಸಸಿಗಳನ್ನು ವಿತರಿಸಲಾಗುತ್ತದೆ. ಭೂಮಿಯ ದಾಖಲೆ ನೀಡಿದವರಿಗೆ ಸಸಿಯೊಂದಕ್ಕೆ 2 ಅಥವಾ 3 ರೂ.ನಲ್ಲಿ ನೀಡಲಾಗುತ್ತದೆ. ಕೃಷಿ ಮತ್ತು ಅರಣ್ಯೀಕರಣಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಉಚಿತವಾಗಿಯೂ ಸಸಿಗಳನ್ನು ವಿತರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಜೂನ 5ರ ಬಳಿಕ ಸಸಿ ವಿತರಣೆ ಕಾರ್ಯ ನಡೆಯಲಿದ್ದು, ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಬ್ರಹ್ಮಾವರ ಉಪವಲಯ ಅರಣ್ಯಾಧಿಕಾರಿ ಹರೀಶ್ ಕೆ. ಮನವಿ ಮಾಡಿದ್ದಾರೆ.
Kshetra Samachara
25/05/2022 05:12 pm