ಕಾಪು: ಕೆಎಸ್‌ಆರ್‌ಟಿಸಿ ಬಸ್ ಗೆ ಢಿಕ್ಕಿ ಹೊಡೆದ ನವಿಲೊಂದು ಸ್ಥಳದಲ್ಲೇ ಮೃತ ಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮೂಳೂರಿನಲ್ಲಿ ನಡೆದಿದೆ.
ಮಂಗಳೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಮೂಳೂರು ಪೆಟ್ರೋಲ್ ಬಂಕ್ ಬಳಿ ಸಂಚರಿಸುತ್ತಿದ್ದಾಗ ಹಠಾತ್ ಆಗಿ ಅಡ್ಡ ಬಂದು ನವಿಲು ಬಡಿದಿದ್ದು, ಬಳಿಕ ಅದು ಮೃತ ಪಟ್ಟಿದೆ.
ನವಿಲು ಮೃತ ಪಟ್ಟಿರುವ ವಿಚಾರ ತಿಳಿದ ಉಪ ವಲಯ ಅರಣ್ಯಾಧಿಕಾರಿ ಜೀವನ್‌ದಾಸ್ ಶೆಟ್ಟಿ, ಫಾರೆಸ್ಟ್ ಗಾರ್ಡ್ ಮಂಜುನಾಥ್, ಚರಣ್ ರಾಜ್ ಜೋಗಿ ಮೊದಲಾದವರು ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ.
Kshetra Samachara
24/06/2022 07:04 pm