ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಪೆರಾರ: ರಸ್ತೆಯಂಚಿಗೆ ಉರುಳಿದ ಬೃಹತ್ ಗಾತ್ರದ ಮರ

ಬಜಪೆ: ಬಜಪೆ, ಪೆರ್ಮುದೆ, ಎಕ್ಕಾರು ಹಾಗೂ ಕಟೀಲು ಪರಿಸರದಲ್ಲಿ ಗುಡುಗು, ಗಾಳಿ ಸಹಿತ ಮಳೆಯಾಗಿದ್ದು, ಕೆಲ ಕಡೆಗಳಲ್ಲಿ ಮರಗಳು ಉರುಳಿಬಿದ್ದು, ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಿತ್ತು.

ಭಾರೀ ಗಾಳಿಗೆ ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಚ್ಚಾಳ ಎಂಬಲ್ಲಿ ಬೃಹತ್ ಗಾತ್ರದ ಮರವೊಂದು ಉರುಳಿ ರಸ್ತೆಯಂಚಿಗೆ ಬಿದ್ದಿದೆ. ಪರಿಣಾಮ, ರಸ್ತೆಯ ಅಂಚಿನ ವಿದ್ಯುತ್ ಕಂಬಗಳಲ್ಲಿ ಹಾದು ಹೋದ ತಂತಿಗಳಿಗೆ ಹಾನಿ ಸಂಭವಿಸಿದೆ. ತಂತಿಯ ಮೇಲೆಯೇ ಮರದ ಕೊಂಬೆಗಳು ಬಿದ್ದ ಪರಿಣಾಮವಾಗಿ ಪರಿಸರದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಿತ್ತು. ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿಗಳು ಆಗಮಿಸಿ ದುರಸ್ತಿ ಮಾಡಿದ್ದಾರೆ.

Edited By : Manjunath H D
Kshetra Samachara

Kshetra Samachara

14/04/2022 06:56 pm

Cinque Terre

13.24 K

Cinque Terre

0