ಉಡುಪಿ: ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಿನ್ನೆ ನಡೆದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರ ಶವ ಇಂದು ಪತ್ತೆಯಾಗಿದೆ.
ಚರಣ್ ಹಾಗೂ ಅಣ್ಣಪ್ಪ ದುರಂತದಲ್ಲಿ ಮೃತಪಟ್ಟ ಮೀನುಗಾರರು. ನಿನ್ನೆ ಬೈಂದೂರು ತಾಲೂಕಿನ ತಾರಾಪತಿಯ ಚರಣ್ ಖಾರ್ವಿ ಎಂಬುವವರಿಗೆ ಸೇರಿದ ಜಯಗುರೂಜಿ ಎಂಬ ಹೆಸರಿನ ದೋಣಿಯಲ್ಲಿ ದೋಣಿ ಮಾಲೀಕ ಚರಣ್ ಸಹಿತ ಒಟ್ಟು ಏಳು ಮಂದಿ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ಮುಗಿಸಿ ಸಂಜೆ ದಡಕ್ಕೆ ಹಿಂದಿರುಗುತ್ತಿದ್ದಾಗ ಅಲೆಗಳ ರಭಸಕ್ಕೆ ಸಿಕ್ಕಿ ದೋಣಿ ಮಗುಚಿ ಬಿದಿದ್ದು, ಈ ವೇಳೆ ದೋಣಿಯಲ್ಲಿದ್ದ ವಿಜೇತ್,ಪ್ರವೀಣ, ಸಚಿನ್, ಸುಮಂತ, ವಾಸುದೇವ ಖಾರ್ವಿ ಈಜಿ ದಡ ಸೇರಿದ್ದುರು. ಚರಣ್ ಹಾಗೂ ಅಣ್ಣಪ್ಪ ನಾಪತ್ತೆ ಆಗಿದ್ದರು,
ರಾತ್ರಿಯಿಂದ ಹುಡುಕಾಟ ನಡೆಸಿದ ಕರಾವಳಿ ಕಾವಲು ಪಡೆಯವರು ಇಬ್ಬರು ಮೀನುಗಾರರ ಶವವನ್ನು ಇಂದು ಮೇಲಕ್ಕೆತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಮೃತ ಮೀನುಗಾರರ ಕುಟುಂಬಕ್ಕೆ ಆರು ಲಕ್ಷ ಸರ್ಕಾರದ ಹಾಗೂ ವೈಯಕ್ತಿಕ ಪರಿಹಾರದ ಭರವಸೆ ನೀಡಿದರು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
18/09/2021 02:12 pm