ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲ್ಲಡ್ಕಕ್ಕೆ ಬಂದ್ರೆ ನೆನಪಾಗೋದು ಕೆ.ಟಿ :ಏನಿದು ಸ್ಪೆಷಲ್?

ಬಂಟ್ವಾಳ: ಕಲ್ಲಡ್ಕ..ಈ ಹೆಸರು ಕೇಳಿದಾಕ್ಷಣ ಪ್ರಯಾಣಿಕರಿಗೆ ಥಟ್ಟನೆ ನೆನಪಾಗುವುದು ಕೆ.ಟಿ. ಅಂದರೆ ಕಲ್ಲಡ್ಕ ಟೀ. ಸಿನಿಮಾ ನಟರಿರಲಿ, ರಾಜಕಾರಣಿಗಳಿರಲಿ, ಜನಸಾಮಾನ್ಯರೇ ಆಗಲಿ, ಉದ್ಯಮಿಗಳೇ ಆಗಲಿ…ವಿಐಪಿಗಳಿರಲಿ, ವಿವಿಐಪಿಗಳೇ ಇರಲಿ, ಕಲ್ಲಡ್ಕಕ್ಕೆ ಬಂದರೆ ಹಳೇ ಕಟ್ಟಡದಲ್ಲಿರುವ ಈ ಹೋಟೆಲ್ ಗೆ ಭೇಟಿ ನೀಡದವರಿಲ್ಲ. ಕುಪ್ಪಿ ಗ್ಲಾಸಿನಲ್ಲಿ ಬುರುಬುರುನೊರೆಯ ಪದರಪದರವಾಗಿ ಕಾಣಿಸುವ, ಚಹ ಕುಡಿಯಲು ಹೆದ್ದಾರಿ ಬದಿಯಲ್ಲಿ ನಿಲ್ಲಿಸಿಯೇ ಹೋಗುತ್ತಾರೆ. ಈ ಚಹದ ಸ್ವಾದ ಅಂಥದ್ದು. ಚಹ ಮಾಡುವ ವಿಶಿಷ್ಟ ವಿಧಾನದ ಮೂಲಕ ಪ್ರಸಿದ್ಧವಾದ ಕೆ.ಟಿ. ಹೋಟೆಲ್ ದಶಕಗಳಿಂದ ಹೆದ್ದಾರಿ ಬದಿಯಲ್ಲಿ ಕಾರ್ಯಾಚರಿಸುತ್ತಿದ್ದು. ಇದರ ಹೆಸರು ಲಕ್ಷ್ಮೀನಿವಾಸ್. ರಸ್ತೆ ಅಭಿವೃದ್ಧಿ ಹಿನ್ನೆಲೆಯಲ್ಲಿ ಈ ಹಳೆಯ ಹೋಟೆಲ್ ಧರಾಶಾಹಿಯಾದರೆ, ಈಗ ಇರುವ ಜಾಗದ ಹಿಂದೆಯೇ ಹೊಸ ಕಟ್ಟಡ ನಿರ್ಮಾಣವಾಗುತ್ತಿದ್ದು, ಕೆಲ ಸಮಯದಲ್ಲೇ ಹೊಸ ವಿನ್ಯಾಸದೊಂದಿಗೆ ಗ್ರಾಹಕರ ಸೇವೆಗೆ ಸಿದ್ಧವಾಗಲಿದೆ.

ಅದೇ ರೀತಿ ಕಲ್ಲಡ್ಕದ ಸಿಂಗಾರಿ ಕಾಂಪ್ಲೆಕ್ಸ್ ಮತ್ತು ಶ್ರೀರಾಮ ಮಂದಿರದ ಬಳಿ ಲಕ್ಷ್ಮೀಗಣೇಶ್ ಹೆಸರಿನ ಕೆ.ಟಿ. ಹೋಟೆಲ್ ಕಾರ್ಯಾಚರಿಸುತ್ತಿದೆ. ಕೆ.ಟಿ. ಚಹದ ಜೊತೆಗೆ ರಿಮ್ ಜಿಮ್ ಕಾಫ್ ವಿಶಿಷ್ಟ ಸ್ವಾದದ ತಿಂಡಿತಿನಿಸುಗಳೊಂದಿಗೆ ಲಕ್ಷ್ಮೀಗಣೇಶ್ ಕಾರ್ಯಾಚರಿಸುತ್ತಿದೆ.

Edited By : PublicNext Desk
Kshetra Samachara

Kshetra Samachara

12/10/2021 01:21 pm

Cinque Terre

10.34 K

Cinque Terre

1