ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಲಿಪು ಮಸೀದಿಯಲ್ಲಿ ಸರಳ ಈದ್ ಮಿಲಾದ್ ಆಚರಣೆ

ಕಾಪು : ಪೊಲಿಪು ಜುಮಾ ಮಸೀದಿಯಲ್ಲಿ ವಿಶ್ವ ಪ್ರವಾದಿ ಮುಹಮ್ಮದ್ ನೆಬಿಯವರ ಜನ್ಮ ದಿನಾಚರಣೆ ಈದ್-ಮಿಲಾದ್ ಸಮಾರಂಭವನ್ನು ಸರಳ ರೀತಿಯಲ್ಲಿ ಗುರುವಾರ ಆಚರಿಸಲಾಯಿತು.

ಪೊಲಿಪು ಜುಮಾ ಮಸೀದಿ ಖತೀಬರಾದ ಇರ್ಷಾದ್ ಸಹದಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು,ಕೊರೋನಾ ಖಾಯಿಲೆ ಹಿನ್ನೆಲೆ

ಸರಕಾರದ ಮಾರ್ಗಸೂಚಿಯಂತೆ ಈ ಬಾರಿ ನಬಿ ದಿನಾಚರಣೆಯನ್ನು ಸರಳವಾಗಿ ಆಚರಿಸುತ್ತಿದ್ದೇವೆ.ಮುಂದಿನ ದಿನಗಳಲ್ಲಿ ಅದ್ದೂರಿಯಾಗಿ ಆಚರಿಸಲು ಅಲ್ಲಾಹನು ಕರುಣಿಸಲಿ ಎಂದರು.ಪಿ.ಬಿ ಅಹಮದ್ ಮುಸ್ಲಿಯಾರ್ ( ಕಾಪು ಉಸ್ತಾದ್) ಕುರಾನ್ ಪಠಿಸಿ ದುವಾ ಪ್ರಾರ್ಥನೆಗೈದರು.

ಪರೀಕ್ಷೆಯಲ್ಲಿ ಉತ್ತೀರ್ಣರಾದ ಮದ್ರಸದ ವಿದ್ಯಾರ್ಥಿಗಳಿಗೆ ಅಬ್ದುಲ್ ರಝಾಕ್ ಕಾಸಿಮಿ ಇವರು ಪ್ರಮಾಣಪತ್ರ ವಿತರಿಸಿದರು. ಮಸೀದಿ ಕಮಿಟಿ ಉಪಾಧ್ಯಕ್ಷರಾದ ಅಮೀರ್ ಹಂಝ ಕಾಪು ಇವರ ನೇತ್ರತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ

ಪ್ರದಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮಾಸ್ಟರ್, ಕೋಶಾಧಿಕಾರಿ ಶೇಖ್ ನಝೀರ್ ಕಾಪು,ಇಮ್ತಿಯಾಝ್ ಅಹಮದ್ ಕಾಪು,ರಜಬ್ ಹಾಜಿ ಮೊಯ್ದಿನ್ ಹಾಗು ಇತರ ಗಣ್ಯರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

29/10/2020 07:46 pm

Cinque Terre

9.34 K

Cinque Terre

2