ಕಾಪು : ಪ್ರಥಮ ಬಾರಿಗೆ ಉಚ್ಚಿಲ ದಸರಾ ನಡೆಯುತ್ತಿದ್ದು ಶೋಭಾ ಯಾತ್ರೆಯಲ್ಲಿ ಸಾವಿರಾರು ಜನ ಸೇರುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಮೆರವಣಿಗೆಯ ಪೂರ್ವ ತಯಾರಿ ಬಗ್ಗೆ ಡಿವೈಎಸ್ ಪಿ ವಿಜಯಪ್ರಸಾದ್ ಮತ್ತು ಕಾಪು ಪೊಲೀಸ್ ವೃತ್ತ ನಿರೀಕ್ಷಕ ಪೂವಯ್ಯ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳಿಗೆ, ಪೊಲೀಸ್ ಸಿಬ್ಬಂದಿಗೆ ಸೂಕ್ತ ಬಂದೋಬಸ್ತ್ ಬಗ್ಗೆ ಮಾಹಿತಿ ನೀಡುವ ಕಾರ್ಯ ಉಚ್ಚಿಲದ ಮೊಗವೀರ ಸಭಾ ಭವನದಲ್ಲಿ ಜರುಗಿತು.
ಶೋಭಾಯಾತ್ರೆಯ ಹಿನ್ನೆಲೆಯಲ್ಲಿ 14 ಮಂದಿ ಎಸೈ, 2 ಮಂದಿ ಡಿವೈಎಸ್ಪಿ, 4 ಮಂದಿ ಸಿಪಿಐ, 22 ಮಂದಿ ಎಎಸೈ, 133 ಪಿಸಿಗಳು, 4 ಡಿಆರ್ ಪೋಲಿಸ್ ವಾಹನ, 1 ಕೆಎಸ್ ಪಿ ವಾಹನ, ಇದರ ಜೊತೆಗೆ 150 ಮಂದಿ ದೇವಳದಿಂದ ನೇಮಿಸಲ್ಪಟ್ಟ ಸ್ವಯಂ ಸೇವಕರು ಇಂದಿನ ಶೋಭಾಯಾತ್ರೆಯ ಬಂದೋಬಸ್ತ್ ಕಾರ್ಯದಲ್ಲಿ ತೊಡಗಲಿರುವರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಸುಧಾಕರ್, ವೃತ್ತ ನಿರೀಕ್ಷಕರಾದ ಅನಂತ ಪದ್ಮನಾಭ, ಪ್ರಮೋದ್ ಕುಮಾರ್, ಸಂಪತ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
05/10/2022 01:42 pm